alex Certify ಹಾವೇರಿಯಲ್ಲಿ ಹೆಚ್ಚಾಯ್ತು ಆತಂಕ: ಮುಂಬೈನಿಂದ ಬಂದವನಿಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವೇರಿಯಲ್ಲಿ ಹೆಚ್ಚಾಯ್ತು ಆತಂಕ: ಮುಂಬೈನಿಂದ ಬಂದವನಿಗೆ ಕೊರೊನಾ

ಹಾವೇರಿ ಜನರ ಆತಂಕ ಈಗ ಹೆಚ್ಚಾಗಿದೆ. ಹಾವೇರಿಯಲ್ಲಿ ಮೊದಲ ಬಾರಿ ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ. ಹಾವೇರಿ ವ್ಯಕ್ತಿಯೊಬ್ಬನಿಗೆ ಕೊರೊನಾ ಕಾಣಿಸಿಕೊಂಡಿದೆ. ವ್ಯಕ್ತಿ ಮುಂಬೈನಿಂದ ಬಂದಿದ್ದ ಎನ್ನಲಾಗಿದೆ.

ಏಪ್ರಿಲ್ 29ರಂದು ವ್ಯಕ್ತಿ ಮುಂಬೈನಿಂದ ಸವಣೂರಿಗೆ ಬಂದಿದ್ದ. ಆತನನ್ನು ಪರೀಕ್ಷೆ ನಡೆಸಿದ ನಂತ್ರ ಕೊರೊನಾ ಇರುವುದು ಪತ್ತೆಯಾಗಿದೆ. ವ್ಯಕ್ತಿ ಮನೆಯಲ್ಲೇ ಇದ್ದ ಎನ್ನಲಾಗಿದೆ. ಇನ್ನಿಬ್ಬರ ಪರೀಕ್ಷೆ ನಡೆದಿದ್ದು, ವರದಿಗಾಗಿ ಕಾಯಲಾಗ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸವಣೂರಿನ 32 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದೆ. ಆತಂಕದ ವಿಷ್ಯವೆಂದ್ರೆ ಆತನಿಗೆ ಯಾವುದೇ ಕೊರೊನಾ ಲಕ್ಷಣಗಳು ಇರಲಿಲ್ಲ. ಆತನಿಗೆ ಉಸಿರಾಟದ ಸಮಸ್ಯೆಯೂ ಇರಲಿಲ್ಲ. ಮುಂಬೈನಿಂದ ಬಂದಿದ್ದಾನೆಂಬ ಕಾರಣಕ್ಕೆ ಪರೀಕ್ಷೆ ನಡೆಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...