alex Certify ಸೈಕಲ್ ಬಳಸುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್ ಬಳಸುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ

ಬೆಂಗಳೂರು ಸಿಟಿಯಲ್ಲಿ ಸೈಕಲ್ ಓಡಿಸುವವರ ಸಂಖ್ಯೆ ತೀರಾ ಕಡಿಮೆಯೇ. ಇಷ್ಟು ವಾಹನಗಳು, ಟ್ರಾಫಿಕ್‌ನಲ್ಲಿ ಸೈಕಲ್ ಓಡಿಸಿಕೊಂಡು ಹೋಗುವುದು ಸವಾಲಿನ ಕೆಲಸವೇ. ಮತ್ತೊಂದು ಕಡೆ ಸರಿಯಾದ ಸಮಯಕ್ಕೆ ಕಚೇರಿಗಳನ್ನು ತಲುಪುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೂ ಸೈಕಲ್ ಬಳಸುವುದಿಲ್ಲ. ಇನ್ನೊಂದೆಡೆ ಮನೆಯಿಂದ ಬಸ್ ನಿಲ್ದಾಣಕ್ಕೆ ಸೈಕಲ್ ಮೂಲಕ ಹೋದರು ಅದನ್ನು ಎಲ್ಲಿ ಪಾರ್ಕ್ ಮಾಡಬೇಕು ಎಂಬುದು ಮತ್ತೊಂದು ಸವಾಲು. ಆದರೆ ಈ ಕಾರಣಗಳಿಗೆ ಇನ್ಮುಂದೆ ಚಿಂತೆ ಮಾಡುವ ಅಗತ್ಯ ಇಲ್ಲ. ಯಾಕೆ ಅಂತೀರಾ ಮುಂದೆ ಓದಿ.

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆಯಾಗಬೇಕೆಂದರೆ ಬೈಸಿಕಲ್ ಬಳಕೆ ಹೆಚ್ಚಾಗಲೇಬೇಕು. ಇದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಟ್ರಯಲ್ ಆಗಿ ಬೈಸಿಕಲ್ ರ‍್ಯಾಕ್‌ಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ಒಂದು ಬಸ್‌ನಲ್ಲಿ ಎರಡು ಸೈಕಲ್‌ಗಳನ್ನು ಇಡಬಹುದಾಗಿದೆ. ಟ್ರಯಲ್ ಆಗಿ 20 ಬಸ್‌ಗಳಲ್ಲಿ ರ‍್ಯಾಕ್ ಅಳವಡಿಸಲು ತೀರ್ಮಾನಿಸಲಾಗಿದೆ.

ಈ ಯೋಜನೆ ಯಶಸ್ವಿಯಾಗಿದಲ್ಲಿ ಇದಕ್ಕೆ ಪ್ರಯಾಣಿಕರು ಸರಿಯಾಗಿ ಸ್ಪಂದಿಸಿದಲ್ಲಿ ಮುಂದಿನ ದಿನಗಳಲ್ಲಿ 100 ಬಸ್‌ಗಳಲ್ಲಿ ರ‍್ಯಾಕ್‌ಗಳನ್ನು ಅಳವಡಿಸಲಾಗುತ್ತದೆಯಂತೆ. ಇನ್ನು ಈಗಾಗಲೇ ಸಪರೇಟ್ ಬಸ್ ಪಥವನ್ನು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರವರೆಗಿನ ಹೊರವರ್ತುಲ ರಸ್ತೆಯಲ್ಲಿ ಮಾಡಲಾಗಿದ್ದು, ಇಲ್ಲಿಯೇ ಸೈಕಲ್ ಪಥಕ್ಕೂ ಅವಕಾಶ ಕಲ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...