alex Certify ಸಂಜೆ ಕತ್ತಲಲ್ಲಿ ಕಂಡ ಬೆಳಕು ನೋಡಿ ದಂಗಾದ ಗ್ರಾಮಸ್ಥರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜೆ ಕತ್ತಲಲ್ಲಿ ಕಂಡ ಬೆಳಕು ನೋಡಿ ದಂಗಾದ ಗ್ರಾಮಸ್ಥರು…!

ಮಂಡ್ಯ ಜಿಲ್ಲೆ ಕೆ.ಆರ್.‌ ಪೇಟೆ ತಾಲೂಕಿನ ಹೆರಗನ ಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಸಂಜೆ 7-15 ರ ಸುಮಾರಿಗೆ ಹಗಲಿನಲ್ಲಿ ಕಾಣುವಂತೆ ಕಂಡ ಬೆಳಕನ್ನು ನೋಡಿ ಬೆರಗಾಗಿದ್ದಾರೆ.

ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಬೆಳಕು ಸುಮಾರು 5 ನಿಮಿಷಗಳ ಕಾಲ ಇತ್ತೆಂದು ಹೇಳಲಾಗಿದೆ. ಈ ದೃಶ್ಯವನ್ನು ಹಲವರು ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ರೀತಿ ಬೆಳಕು ಕಾಣಲು ಏನು ಕಾರಣವೆಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಭಾರೀ ಶಬ್ದ ಕೇಳಿ ಬಂದಾಗ ಜನತೆ ಗಾಬರಿಗೊಂಡಿದ್ದರಾದರೂ ಬಳಿಕ ಅದು ಯುದ್ದ ವಿಮಾನ ಹಾದು ಹೋದ ಪರಿಣಾಮ ಎಂಬುದು ತಿಳಿದುಬಂದಿತ್ತು. ಇದೀಗ ಬೆಳಕಿನ ಮೂಲದ ಕುರಿತು ತಿಳಿದುಬರಬೇಕಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...