alex Certify ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ಮುಡಿಗೆ ಇಂದು ಮತ್ತೊಂದು ಗರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ಮುಡಿಗೆ ಇಂದು ಮತ್ತೊಂದು ಗರಿ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಚಿಕಿತ್ಸಾ ವಿಧಾನದ ಇತಿಹಾಸವನ್ನು ಮರುಕಳಿಸುವ `ವೈದ್ಯ ಸಾಧನ ಕೋಶ’ ವೆಂಬ ವೈದ್ಯಕೀಯ ಸಲಕರಣದ ಸಂಗ್ರಹಾಲಯವನ್ನು ಇಂದು ಉದ್ಘಾಟಿಸಲಾಯಿತು.

ಮೆಗ್ಗಾನ್ ಆಸ್ಪತ್ರೆಗೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಜಿಲ್ಲೆ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಬಡ ರೋಗಿಗಳಿಗೆ ವರದಾನವಾಗಿದೆ. ಅನೇಕ ಆರೋಪಗಳ ನಡುವೆಯೂ ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡುತ್ತಾ ಇಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆವರೆಗೂ ಬಂದು ನಿಂತಿದೆ.

ಆಸ್ಪತ್ರೆ ಆರಂಭದ ದಿನಗಳಲ್ಲಿ ಹೇಗೆ ಚಿಕಿತ್ಸೆ ನಡೆಯುತ್ತಿತ್ತು. ಸಲಕರಣೆಗಳ ಬಳಕೆ ಹೇಗೆ ಆಗುತ್ತಿತ್ತು. ಆಗಿನ ಗಾಜಿನ ಚುಚುಮದ್ದು ಉಪಕರಣ, ಔಷಧಿ ಸಂಗ್ರಾಲಯದ ಉಪಕರಣ, ದೊಡ್ಡ ದೊಡ್ಡ ಗಾಜಿನ ಬಾಟಲಿಗಳು, ಶಸ್ತ್ರ ಚಿಕಿತ್ಸೆಗಳ ಉಪಕರಣಗಳು ಹೀಗೆ ಹಲವಾರು ರೀತಿಯ ಚಿಕಿತ್ಸಾ ವಿಧಾನಗಳನ್ನು ಮತ್ತೊಮ್ಮೆ ನೆನಪಿಸುವ ಈ ವೈದ್ಯ ಸಾಧನ ಕೋಶ ಒಂದು ರೀತಿಯಲ್ಲಿ ವಸ್ತು ಸಂಗ್ರಹಾಲಯವೇ ಆಗಿದೆ. ಇದನ್ನು ಮತ್ತಷ್ಟು ವಿಸ್ತರಿಸಿದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ವಸ್ತು ಸಂಗ್ರಹ ರೂಪುಗೊಂಡು ಜನರನ್ನು ಆಕರ್ಷಿಸುವಲ್ಲಿ ಅನುಮಾನಗಳೇ ಇಲ್ಲ. ಇಂದು ಮೆಗ್ಗಾನ್ ಆಸ್ಪತ್ರೆ ಸ್ಥಾಪನೆಗೆ ಕಾರಣಿಭೂತರಾದ ಬ್ರಿಟಿಷ್ ಅಧಿಕಾರಿಗಳ ಭಾವಚಿತ್ರಕ್ಕೆ ಪುಷ್ಪನಮನ ಕೂಡ ಸಲ್ಲಿಸಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...