alex Certify ರಮೇಶ್ ಬೆಂಬಲಿಗರ ಭುಗಿಲೆದ್ದ ಆಕ್ರೋಶ: ಬಸ್ ಗಳಿಗೆ ಕಲ್ಲು ತೂರಾಟ – ಹಲವೆಡೆ ಮಾರ್ಕೆಟ್ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಮೇಶ್ ಬೆಂಬಲಿಗರ ಭುಗಿಲೆದ್ದ ಆಕ್ರೋಶ: ಬಸ್ ಗಳಿಗೆ ಕಲ್ಲು ತೂರಾಟ – ಹಲವೆಡೆ ಮಾರ್ಕೆಟ್ ಬಂದ್

ಬೆಳಗಾವಿ: ರಾಸಲೀಲೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದ್ದು, ಒಂದೆಡೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಾರ್ಕೆಟ್ ಗಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿದ್ದರೆ, ಇನ್ನೊಂದೆಡೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ಬೆಂಬಲಿಗರು ಗೋಕಾಕ್ ಫಾಲ್ಸ್ ರಸ್ತೆ, ಕೊಣ್ಣೂರ, ಮಮದಾರ, ಪಾರನಟ್ಟಿ ಕ್ರಾಸ್ ನಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತ ಕೆಲವು ಬೆಂಬಲಿಗರು ಗೋಕಾಕ್ ಬಸ್ ನಿಲ್ದಾಣದಲ್ಲಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬಸ್ ಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಇಂಥ ಮಾನಗೆಟ್ಟ ಸರ್ಕಾರ ನಮಗೆ ಬೇಕಾ…..? ಸಿದ್ದರಾಮಯ್ಯ ಪ್ರಶ್ನೆ

ಜಾರಕಿಹೊಳಿ ರಾಜೀನಾಮೆ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಬೆಳಗಾವಿ ಜಿಲ್ಲಾ ಬಂದ್ ನಡೆಸುವ ಮೂಲಕ ಉಗ್ರ ಹೋರಾಟಕ್ಕೆ ಕರೆ ನೀಡುವುದಾಗಿ ಬೆಂಬಲಿಗರು ಎಚ್ಚರಿಸಿದ್ದಾರೆ. ಇನ್ನೊಂದೆಡೆ ಬೆಳಗಾವಿ ನಗರದಲ್ಲಿ ಕೆಲವೆಡೆ ಮಾರ್ಕೆಟ್ ನ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...