alex Certify ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ ವಾಗ್ದಾಳಿ

ದಾವಣಗೆರೆ: ಯಡಿಯೂರಪ್ಪ ಅವರಂತಹ ಭ್ರಷ್ಟ ಹಾಗೂ ದುರ್ಬಲ ಮುಖ್ಯಮಂತ್ರಿಯನ್ನು ನಾನು ಇತಿಹಾಸದಲ್ಲೇ ಕಂಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಚೆಕ್ ಮೂಲಕ ಭ್ರಷ್ಟಾಚಾರ ನಡೆಸಿದರೆ, ಅವರ ಮಗ ವಿಜಯೇಂದ್ರ ಆರ್ ಟಿ ಜಿ ಎಸ್ ಮೂಲಕ ಮಾಡುತ್ತಿದ್ದಾರೆ. ಇಷ್ಟು ಕೆಟ್ಟ ಸಿಎಂ ಅವರನ್ನು ರಾಜ್ಯದ ಇತಿಹಾಸದಲ್ಲಿಯೇ ನೋಡಿರಲಿಲ್ಲ ಎಂದು ಗುಡುಗಿದರು.

ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು. ಅವರ ಪಕ್ಷದವರೇ ಈಗ ಆರೋಪಗಳನ್ನು ಮಾಡುತ್ತಿದ್ದಾರೆ. ಸಿಡಿ ವಿಚಾರ ಏನೆಂಬುದು ಬಹಿರಂಗವಾಗಬೇಕು. ರಾಜ್ಯದ ಜನತೆಗೆ ಗೊತ್ತಾಗಬೇಕು. ಈ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಎಂದು ಆಗ್ರಹಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...