alex Certify ಎರಡು ರಾತ್ರಿ – ಒಂದು ಹಗಲು ಬಂದ್ ಆಗಿರಲಿದೆ ರಾಜ್ಯ…! ಈ ಅವಧಿಯಲ್ಲಿ ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ರಾತ್ರಿ – ಒಂದು ಹಗಲು ಬಂದ್ ಆಗಿರಲಿದೆ ರಾಜ್ಯ…! ಈ ಅವಧಿಯಲ್ಲಿ ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ

ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ಸಲ್ಲಿಕೆಗಳನ್ನು ನೀಡಲಾಗಿದ್ದು, ಹೀಗಾಗಿ ಬಹುತೇಕ ಕೆಲಸ ಕಾರ್ಯಗಳು ಈ ಹಿಂದಿನಂತೆ ಆರಂಭವಾಗಿವೆ. ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ಡೌನ್ ಮಾಡಲಾಗುತ್ತಿದ್ದು, ಇಂದು ಸಂಜೆಯಿಂದಲೇ ಅದು ಜಾರಿಗೆ ಬರಲಿದೆ.

ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ತಾಸುಗಳ ಕಾಲ ರಾಜ್ಯದಾದ್ಯಂತ ಕರ್ಪ್ಯೂ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಎರಡು ರಾತ್ರಿ – ಒಂದು ಹಗಲು ರಾಜ್ಯ ಬಂದ್ ಆಗಲಿದ್ದು, ಈ ಸಂದರ್ಭದಲ್ಲಿ ಏನಿರುತ್ತೆ…? ಏನಿರಲ್ಲ…? ಎಂಬುದರ ಮಾಹಿತಿ ಇಲ್ಲಿದೆ.

ಬಿಎಂಟಿಸಿ, ಕೆಎಸ್ಸಾರ್ಟಿಸಿ, ಖಾಸಗಿ ಬಸ್, ರೈಲು, ಆಟೋ, ಟ್ಯಾಕ್ಸಿ, ಕ್ಯಾಬ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಮದ್ಯದಂಗಡಿ, ಸಲೂನ್ ಮುಚ್ಚಿರಲಿದ್ದು, ಕೈಗಾರಿಕೆಗಳು ತೆರೆಯುವುದಿಲ್ಲ. ಪಾರ್ಕುಗಳು ಸಹ ಮುಚ್ಚಿರಲಿದ್ದು, ವ್ಯಾಪಾರ-ವಹಿವಾಟು ಬಂದ್ ಆಗಲಿದೆ. ಚಿತ್ರಮಂದಿರ, ಶಾಪಿಂಗ್ ಮಾಲ್ ಈ ಹಿಂದಿನಂತೆ ಕಾರ್ಯ ನಿರ್ವಹಿಸುವುದಿಲ್ಲ.

ಇನ್ನು ಔಷಧ ಅಂಗಡಿ, ಹಾಲು, ತರಕಾರಿ, ಮಾಂಸದ ಅಂಗಡಿ ಹೋಟೆಲ್ ನಲ್ಲಿ ಪಾರ್ಸೆಲ್, ಆಸ್ಪತ್ರೆ, ಕ್ಲಿನಿಕ್, ಆನ್ ಲೈನ್ ತರಗತಿ ಎಂದಿನಂತೆ ನಡೆಯಲಿದ್ದು ಅಂಬುಲೆನ್ಸ್, ಪೊಲೀಸ್ ಹಾಗೂ ಮಾಧ್ಯಮಗಳ ಸೇವೆಗೆ ಯಾವುದೇ ಅಡೆತಡೆ ಇರುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...