alex Certify ಇತಿಹಾಸ ಪ್ರಸಿದ್ದ ಕಡಲೆಕಾಯಿ ಪರಿಷೆಗೆ ತಟ್ಟಿದ ಕೊರೊನಾ ಬಿಸಿ: ಸರಳ ಪೂಜೆಗೆ ತೀರ್ಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇತಿಹಾಸ ಪ್ರಸಿದ್ದ ಕಡಲೆಕಾಯಿ ಪರಿಷೆಗೆ ತಟ್ಟಿದ ಕೊರೊನಾ ಬಿಸಿ: ಸರಳ ಪೂಜೆಗೆ ತೀರ್ಮಾನ

ಕೊರೊನಾ ಮಹಾಮಾರಿಯಿಂದಾಗಿ ಉತ್ಸವಗಳು, ಸಮಾರಂಭಗಳು ಸರಳವಾಗಿ ನಡೆಸಬೇಕಾಗಿದೆ. 2020ರ ಇಡೀ ವರ್ಷ ನಡೆದ ಕಾರ್ಯಕ್ರಮಗಳೆಲ್ಲ ಸರಳವಾಗಿಯೇ ನಡೆಯುತ್ತಿದೆ. ಇದೀಗ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಯನ್ನು ಈ ವರ್ಷ ಸರಳವಾಗಿ ಆಚರಿಸೋದಿಕ್ಕೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ಹೌದು, 480 ವರ್ಷಗಳ ಬಳಿಕ ಮೊದಲ ಬಾರಿಗೆ ಅತೀ ಸರಳವಾಗಿ ಕಡಲೆಕಾಯಿ ಪರಿಷೆ ಆಚರಣೆ ಮಾಡಲಾಗುತ್ತಿದೆ. ಕಾರ್ತಿಕ ಮಾಸದ ಕೊನೆಯ ಸೋಮವಾರದಂದು 3 ದಿನಗಳ ಕಾಲ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯನ್ನು ಅದ್ಧುರಿಯಾಗಿ ಮಾಡಲಾಗುತ್ತಿತ್ತು. ಆದರೆ ಈ ವರ್ಷ ದೊಡ್ಡ ಗಣೇಶ ಹಾಗೂ ಬಸವಣ್ಣನಿಗೆ ಪೂಜೆ ಮಾಡುವ ಮೂಲಕ ಅತಿ ಸರಳವಾಗಿ ಇದನ್ನು ನೆರವೇರಿಸಲಾಗುತ್ತಿದೆ.

ಪ್ರತಿ ವರ್ಷ ಪರಿಷೆಗೆ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಸಾವಿರಾರು ಮಾರಾಟಗಾರರು ಹಾಗೂ ಲಕ್ಷಾಂತರ ಭಕ್ತರು ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾ ಹರಡೋ ಸಾಧ್ಯತೆ ಇರೋದ್ರಿಂದ ಕಡಲೆಕಾಯಿ ಮಾರಾಟಕ್ಕೂ ಅನುಮತಿ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...