alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ರಾತ್ರಿ – ಒಂದು ಹಗಲು ಬಂದ್ ಆಗಿರಲಿದೆ ರಾಜ್ಯ…! ಈ ಅವಧಿಯಲ್ಲಿ ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಮಾಹಿತಿ

ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ಸಲ್ಲಿಕೆಗಳನ್ನು ನೀಡಲಾಗಿದ್ದು, ಹೀಗಾಗಿ ಬಹುತೇಕ ಕೆಲಸ ಕಾರ್ಯಗಳು ಈ ಹಿಂದಿನಂತೆ ಆರಂಭವಾಗಿವೆ. ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ಡೌನ್ ಮಾಡಲಾಗುತ್ತಿದ್ದು, ಇಂದು ಸಂಜೆಯಿಂದಲೇ ಅದು ಜಾರಿಗೆ ಬರಲಿದೆ.

ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ತಾಸುಗಳ ಕಾಲ ರಾಜ್ಯದಾದ್ಯಂತ ಕರ್ಪ್ಯೂ ಜಾರಿಯಲ್ಲಿರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರಲಿದೆ. ಎರಡು ರಾತ್ರಿ – ಒಂದು ಹಗಲು ರಾಜ್ಯ ಬಂದ್ ಆಗಲಿದ್ದು, ಈ ಸಂದರ್ಭದಲ್ಲಿ ಏನಿರುತ್ತೆ…? ಏನಿರಲ್ಲ…? ಎಂಬುದರ ಮಾಹಿತಿ ಇಲ್ಲಿದೆ.

ಬಿಎಂಟಿಸಿ, ಕೆಎಸ್ಸಾರ್ಟಿಸಿ, ಖಾಸಗಿ ಬಸ್, ರೈಲು, ಆಟೋ, ಟ್ಯಾಕ್ಸಿ, ಕ್ಯಾಬ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಮದ್ಯದಂಗಡಿ, ಸಲೂನ್ ಮುಚ್ಚಿರಲಿದ್ದು, ಕೈಗಾರಿಕೆಗಳು ತೆರೆಯುವುದಿಲ್ಲ. ಪಾರ್ಕುಗಳು ಸಹ ಮುಚ್ಚಿರಲಿದ್ದು, ವ್ಯಾಪಾರ-ವಹಿವಾಟು ಬಂದ್ ಆಗಲಿದೆ. ಚಿತ್ರಮಂದಿರ, ಶಾಪಿಂಗ್ ಮಾಲ್ ಈ ಹಿಂದಿನಂತೆ ಕಾರ್ಯ ನಿರ್ವಹಿಸುವುದಿಲ್ಲ.

ಇನ್ನು ಔಷಧ ಅಂಗಡಿ, ಹಾಲು, ತರಕಾರಿ, ಮಾಂಸದ ಅಂಗಡಿ ಹೋಟೆಲ್ ನಲ್ಲಿ ಪಾರ್ಸೆಲ್, ಆಸ್ಪತ್ರೆ, ಕ್ಲಿನಿಕ್, ಆನ್ ಲೈನ್ ತರಗತಿ ಎಂದಿನಂತೆ ನಡೆಯಲಿದ್ದು ಅಂಬುಲೆನ್ಸ್, ಪೊಲೀಸ್ ಹಾಗೂ ಮಾಧ್ಯಮಗಳ ಸೇವೆಗೆ ಯಾವುದೇ ಅಡೆತಡೆ ಇರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...