alex Certify ಕೋವಿಶೀಲ್ಡ್ ಲಸಿಕೆಗೆ ಇಟಲಿ ಹಸಿರು ನಿಶಾನೆ: ಇನ್ಮುಂದೆ ಭಾರತೀಯರು ಪಡೆಯಬಹುದು ಗ್ರೀನ್ ಪಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಶೀಲ್ಡ್ ಲಸಿಕೆಗೆ ಇಟಲಿ ಹಸಿರು ನಿಶಾನೆ: ಇನ್ಮುಂದೆ ಭಾರತೀಯರು ಪಡೆಯಬಹುದು ಗ್ರೀನ್ ಪಾಸ್

ರೋಮ್: ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರಿಗೆ ಇಟಲಿ ಸರಕಾರ ಗುಡ್ ನ್ಯೂಸ್ ನೀಡಿದೆ. ಕೋವಿಶೀಲ್ಡ್ ಲಸಿಕೆಗೆ ಇಟಲಿ ಹಸಿರು ನಿಶಾನೆ ತೋರಿಸಿದ್ದು, ಲಸಿಕೆ ಪಡೆದ ಭಾರತೀಯರು ಗ್ರೀನ್ ಪಾಸ್ ಪಡೆಯಬಹುದು. ಈ ಯಶಸ್ಸು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಇಟಲಿ ಸರಕಾರದ ಆರೋಗ್ಯ ಸಚಿವ ರಾಬರ್ಟೊ ಸ್ಪೆರಾನ್ಜಾ ಅವರ ಭೇಟಿಯ ನಂತರ ಸಿಕ್ಕ ಮಹತ್ವದ ನಿರ್ಣಯವಾಗಿದೆ.

ಈ ಬಗ್ಗೆ ಇಟಲಿಯಲ್ಲಿರುವ ಭಾರತದ ರಾಯಭಾರ ಕಚೇರಿಯು ಟ್ವೀಟ್ ಮಾಡಿದ್ದು, “ಜಿ20 ಆರೋಗ್ಯ ಸಚಿವರಾದ ಗೌರವಾನ್ವಿತ ಮನ್ಸುಖ್ ಮಾಂಡವಿಯಾ ಮತ್ತು ಇಟಾಲಿಯನ್ ಆರೋಗ್ಯ ಮಂತ್ರಿ ರಾಬರ್ಟೊ ಸ್ಪೆರಾನ್ಜಾ ಜೊತೆಗೆ ಭಾರತದ ನಿರಂತರ ಪ್ರಯತ್ನಗಳಿಂದ, ಭಾರತದ ಕೋವಿಶೀಲ್ಡ್ ಅನ್ನು ಗುರುತಿಸಿದೆ. ಈ ಲಸಿಕೆ ಪಡೆದ ಭಾರತೀಯರು ಗ್ರೀನ್ ಪಾಸ್ ಗೆ ಅರ್ಹರಾಗಿದ್ದಾರೆ” ಎಂದು ಹೇಳಿದೆ.

BIG NEWS: ಆಸ್ತಿ ಮಾಲೀಕತ್ವ ಕುರಿತಂತೆ ಸುಪ್ರೀಂನಿಂದ ಮಹತ್ವದ ತೀರ್ಪು

ಬುಧವಾರದಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಮ್ಮ ಇಟಲಿಯ ವಿದೇಶಾಂಗ ಸಚಿವ ಲುಯಿಗಿ ಡಿ ಮೈಯೊ ಅವರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಲಸಿಕೆ ಲಭ್ಯತೆ ಮತ್ತು ಸುಗಮ ಪ್ರಯಾಣಕ್ಕೆ ಸಂಬಂಧಿಸಿದ ಸವಾಲುಗಳ ಕುರಿತು ಚರ್ಚಿಸಿದ್ದರು. ಇಟಲಿಯ ವಿದೇಶಾಂಗ ಸಚಿವ ಲುಯಿಗಿ ಡಿ ಮೈಯೊ ಪ್ರಸ್ತುತ ಜಿ 20 ಅಧ್ಯಕ್ಷರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...