alex Certify ‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಒಮಿಕ್ರಾನ್’ ಗುರುತಿಸಿದ್ದರ ದಿನದ ಅನುಭವ ಬಿಚ್ಚಿಟ್ಟ ವಿಜ್ಞಾನಿ

ಕೆಲದಿನಗಳ ಹಿಂದೆ ಕೋವಿಡ್ ವೈರಾಣುವಿನ ಜೀನೋಮ್ ಅಧ್ಯಯನಕ್ಕೆಂದು ಎಂಟು ಸ್ಯಾಂಪಲ್‌ ಗಳನ್ನು ಪರೀಕ್ಷಿಸಿದ ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯವೊಂದರ ವಿಜ್ಞಾನ ವಿಭಾಗದ ಮುಖ್ಯಸ್ಥೆ ರಾಕೆಲ್ ವಿಯಾನಾ ತಮ್ಮ ಜೀವಮಾನದ ಶಾಕ್‌ಗೆ ಒಳಗಾಗಿದ್ದಾರೆ.

ಲ್ಯಾನ್ಸೆಟ್‌ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ಈ ಸ್ಯಾಂಪಲ್‌ಗಳಲ್ಲಿ ಬಹುದೊಡ್ಡ ಪ್ರಮಾಣದ ಮ್ಯುಟೇಷನ್‌ಗಳು ಪತ್ತೆಯಾಗಿದ್ದು, ಮಾನವರ ದೇಹ ಪ್ರವೇಶಿಸಲು ವೈರಾಣುಗಳು ಬಳಸುವ ಸ್ಪೈಕ್ ಪ್ರೋಟೀನ್‌ನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.

“ನಾನು ಏನು ನೋಡಿದೆನೋ ಅದರಿಂದ ಶಾಕ್ ಆಗಿದ್ದೆ. ಪ್ರಯೋಗದ ಪ್ರಕ್ರಿಯೆಯಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ನಾನು ಪ್ರಶ್ನಿಸಿದೆ. ಈ ಸ್ಯಾಂಪಲ್‌ ಗಳಿಂದಾಗಿ ಬಹಳ ದೊಡ್ಡ ಪರಿಣಾಮಗಳೇ ಆಗಲಿವೆ ಎಂಬ ಆಲೋಚನೆಗಳು ಮೊಳೆಯತೊಡಗಿದವು. ಇವುಗಳನ್ನು ಹೇಗೆ ವಿಶ್ಲೇಷಿಸುವುದು ಎಂಬುದು ನನಗೆ ಅರ್ಥವಾಗಲಿಲ್ಲ. ನನಗಂತೂ ಇವು ಹೊಸ ವಿಧದ ವೈರಾಣುಗಳು ಎನಿಸುತ್ತವೆ,” ಎಂದು ರಾಕೆಲ್ ತಿಳಿಸಿದ್ದಾರೆ.

ಈ ಯೋಜನೆಯಲ್ಲಿ ಪ್ರತಿನಿತ್ಯ 2 ರೂ. ಉಳಿಸಿ ವಾರ್ಷಿಕ 36,000 ರೂ. ʼಪಿಂಚಣಿʼ ಪಡೆಯಿರಿ

ಈ ಅನುಭವವಾದ ಕೂಡಲೇ ಜೋಹಾನ್ಸ್‌ಬರ್ಗ್‌ನಲ್ಲಿರುವ ರಾಷ್ಟ್ರೀಯ ಸಂಪರ್ಕ ರೋಗಗಳ ಅಧ್ಯಯನ ಸಂಸ್ಥೆಗೆ (ಎನ್‌ಐಸಿಡಿ) ಕರೆ ಮಾಡಿದ ವಿಯಾನಾ, ಅಲ್ಲಿನ ಜೀನ್ ಅಧ್ಯಯನಕಾರ ಡೇನಿಯಲ್‌ ಅಮೋವಾಕೋ ಜೊತೆಗೆ ಸಂವಹನ ನಡೆಸಿ, ತಾವು ಮಾಡಿದ ಪತ್ತೆಯಲ್ಲಿ ಯಾವುದೇ ಲೋಪವಿಲ್ಲ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಕೋವಿಡ್ ಪಾಸಿಟಿವ್‌ ಪ್ರಕರಣಗಳಲ್ಲಿ ತೀವ್ರತರನಾದ ಏರಿಕೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ತಕ್ಷಣವೇ ದಕ್ಷಿಣ ಆಫ್ರಿಕಾದ್ಯಂತ ಇರುವ ಆರೋಗ್ಯ ಇಲಾಖೆಯ ಎಲ್ಲಾ ಪ್ರಯೋಗಾಲಯಗಳಲ್ಲೂ ಇಂಥದ್ದೇ ಸೀಕ್ವೆನ್ಸಿಂಗ್ ಮಾಡಲು ಸೂಚನೆ ಹೊರಡಿಸಲಾಯಿತು. ಎಲ್ಲಾ ಪರೀಕ್ಷೆಗಳಲ್ಲೂ ಸಹ ಲ್ಯಾನ್ಸೆಟ್‌ ಲ್ಯಾಬ್‌ನಲ್ಲಿ ಕಂಡ ಫಲಿತಾಂಶವೇ ಹೊರಬಂದಿದೆ.

ಮ್ಯುಟೇಷನ್ ವೇಳೆಯಲ್ಲಿ ಎಸ್‌-ಜೀನ್‌ ಒಂದು ಹೊರಬಿದ್ದು, ಈ ಹೊಸ ಅವತಾರಿ ಒಮಿಕ್ರಾನ್ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದ ಜೋಹಾನ್ಸ್‌ಬರ್ಗ್ ಹಾಗೂ ಪ್ರಿಟೋರಿಯಾ ನಗರಗಳಲ್ಲಿ ಕಂಡು ಬಂದ ಕೋವಿಡ್ ಪಾಸಿಟಿವ್‌ ಪ್ರಕರಣಗಳ ಅಧ್ಯಯನ ನಡೆಸಿದ ಬಳಿಕ ’ಭಯ ಹುಟ್ಟಿಸುವ ಈ ಅಂಶ ಬೆಳಕಿಗೆ ಬಂದಿದೆ’ ಎನ್ನುತ್ತಾರೆ ಅಮೋವಾಕೋ.

ಇದರ ಬೆನ್ನಿಗೇ, ನವೆಂಬರ್‌ 24ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಎನ್‌ಐಸಿಡಿ ಅಧಿಕಾರಿಗಳು ಒಮಿಕ್ರಾನ್ ವೈರಾಣುಗಳ ಬಗ್ಗೆ ವಿಚಾರ ಮುಟ್ಟಿಸಿದ್ದಾರೆ.

ಒಮಿಕ್ರಾನ್ ಎಂದು ಕರೆಯಲಾಗುವ ಕೋವಿಡ್‌ನ ಅವತಾರಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗುತ್ತಲೇ ಜಾಗತಿಕ ಮಟ್ಟದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆಫ್ರಿಕಾದ ದಕ್ಷಿಣ ಭಾಗದಿಂದ ಬರುವ ಮಂದಿಗೆ ಸಂಚಾರ ನಿಷೇಧ ಸೇರಿದಂತೆ ಇನ್ನಷ್ಟು ಕ್ರಮಗಳನ್ನು ವಿವಿಧ ದೇಶಗಳು ತೆಗೆದುಕೊಂಡಿವೆ.

ಈ ಒಮಿಕ್ರಾನ್ ಅವತಾರಿಯು ಲಸಿಕೆ ಪಡೆದ ಮಂದಿಯಲ್ಲೂ ಹಬ್ಬುವ ಸಾಧ್ಯತೆಗಳು ಇರುವುದು ಭಯ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...