
ಬೆಂಗಳೂರು: 10.27 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿಯ ಖಾತ್ರಿಯೊಂದಿಗೆ ಈ ಬಾರಿಯ ಜಿಮ್ 2025 ಯಶಸ್ವಿಯಾಗಿದೆ ಎಂದು ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈಗಾಗಲೇ ವೇಮಗಲ್ ನಲ್ಲಿ ಕ್ರೋನ್ಸ್ ಸಂಸ್ಥೆಯ ಉತ್ಪಾದನಾ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು, ಹೂಡಿಕೆ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ. ವಾಗ್ದಾನ ಮಾಡಿರುವ ಪ್ರತಿ ಹೂಡಿಕೆದಾರರಿಗೆ ಓರ್ವ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಹರಿದು ಬಂದಿರುವ ಬಂಡವಾಳ ಹೂಡಿಕೆಯನ್ನು ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.