alex Certify ನಿದ್ದೆ ಹೋದ ಹುಡುಗನ ಮುಖದ ಮೇಲೆ ಮೂಡಿತ್ತು ಹಲ್ಲಿಯ ಅಚ್ಚು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ದೆ ಹೋದ ಹುಡುಗನ ಮುಖದ ಮೇಲೆ ಮೂಡಿತ್ತು ಹಲ್ಲಿಯ ಅಚ್ಚು..!

ಶಾಲಾ ದಿನಗಳಲ್ಲಿ ಹೋಂ ವರ್ಕ್​ ಮಾಡ್ತಾ ಮಾಡ್ತಾ ನೀವು ಎಂದಾದರೂ ನಿದ್ದೆ ಹೋಗಿದ್ದು ಇದೆಯಾ..?‌ ಎಲ್ಲರಿಗೂ ಇಂತಹದ್ದೊಂದು ಅನುಭವ ಇದ್ದೇ ಇರುತ್ತೆ. ನೀವು ಈ ರೀತಿ ಮಲಗಿದ್ದ ವೇಳೆ ತಾಯಿಯೋ ಇಲ್ಲವೇ ಶಿಕ್ಷಕರು ಬಂದು ಎಬ್ಬಿಸಿದ್ರು ಅಂದರೆ ಕತೆ ಮುಗೀತು ಅಂತಾನೇ ಅರ್ಥ.

ಇದೇ ರೀತಿ ತೈವಾನ್​ನ ಪುಟ್ಟ ಹುಡುಗ ಕೂಡ ಹೋಂ ವರ್ಕ್ ಮಾಡುತ್ತಲೇ ನಿದ್ದೆ ಹೋಗಿದ್ದ. ಆದರೆ ಆತ ಏಳುವ ವೇಳೆಗೆ ಮುಖದ ಮೇಲೆ ಹಲ್ಲಿಯ ಅಚ್ಚು ಮೂಡಿದೆ.

ಅರೆ..! ಇದು ಹೇಗೆ ಸಾಧ್ಯ ಅಂದು ಕೊಂಡ್ರಾ..? ಟ್ವಿಟರ್​ನಲ್ಲಿ ಶೇರ್​ ಮಾಡಲಾದ ಫೋಟೋದಲ್ಲಿ ಒಂದು ಕಡೆ ಮಗುವಿನ ಮುಖದ ಮೇಲೆ ಹಲ್ಲಿಯ ಅಚ್ಚು ಮೂಡಿದ್ರೆ ಇನ್ನೊಂದು ಕಡೆ ಆತನ ಹೋಂ ವರ್ಕ್​ ಪುಸ್ತಕದ ಮೇಲೆ ಸತ್ತ ಹಲ್ಲಿ ಇರೋದನ್ನ ನೀವು ಕಾಣಬಹುದಾಗಿದೆ. ಈ ಪೋಸ್ಟ್ ಸಖತ್​ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...