alex Certify ಲಾಕ್‌ ಡೌನ್‌ ಸಂದರ್ಭದಲ್ಲಿ ಪತಿ-ಪತ್ನಿಯಿಂದ ವಿಚಿತ್ರ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್‌ ಸಂದರ್ಭದಲ್ಲಿ ಪತಿ-ಪತ್ನಿಯಿಂದ ವಿಚಿತ್ರ ದಾಖಲೆ

ಲಾಕ್ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಜನರು ಮನೆಯಲ್ಲಿ ಕುಳಿತು ವಿವಿಧ ಪ್ರಯೋಗಗಳನ್ನು ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದೇ ವೇಳೆ ಅಮೆರಿಕದ ವಾಯುವ್ಯ ಭಾಗದಲ್ಲಿನ ನಗರವೊಂದರಲ್ಲಿ ಗಂಡ-ಹೆಂಡತಿ ಸೇರಿ ವಿಶ್ವದಾಖಲೆಯೊಂದನ್ನು ಮಾಡಿ ಸುದ್ದಿಯಾಗಿದ್ದಾರೆ.

ಒಂದು ನಿಮಿಷದಲ್ಲಿ ಅತಿಹೆಚ್ಚು ಟೀ ಶರ್ಟ್ ಧರಿಸಿ ಗಿನ್ನಿಸ್ ಪುಸ್ತಕದಲ್ಲಿ ಸೇರಿದ್ದಾರೆ. ಈ ದಾಖಲೆ ಮಾಡಿದ ಡೇವಿಡ್ ರಶ್ ದಂಪತಿಗೆ ಈ ದಾಖಲೆಗಳು ಹೊಸದೇನಲ್ಲ.‌ ನೂರಕ್ಕೂ ಹೆಚ್ಚು ವಿಶ್ವದಾಖಲೆಗಳು ಅವರ ಹೆಸರಿನಲ್ಲಿದೆ.

ಒಂದು ನಿಮಿಷದಲ್ಲಿ ಗರಿಷ್ಠ ಟೀ ಶರ್ಟ್ ಧರಿಸುವ ಪ್ರಯತ್ನದ ವಿಡಿಯೋ ಬಿತ್ತರಿಸಿದ್ದು, ಅಲ್ಲಿರುವಂತೆ ನೆಲದ ಮೇಲೆ ಟಿ-ಶರ್ಟ್ ಗಳನ್ನು ಇಟ್ಟಿದ್ದು ಡೇವಿಡ್ ಗೆ ಪತ್ನಿ ಜೆನ್ನಿಫರ್ ಸಹಾಯ ಮಾಡುತ್ತಾರೆ.

ಟೈಮರ್ ಪ್ರಾರಂಭವಾಗುತ್ತಿದ್ದಂತೆ ಡೇವಿಡ್ ತನ್ನ ಮೊಣಕಾಲ ಮೇಲೆ ಚಲಿಸುತ್ತಾರೆ, ಪತ್ನಿ ಅವರಿಗೆ ಸಹಾಯ ಮಾಡುತ್ತಾರೆ. ಹೀಗೆ ಒಂದು ನಿಮಿಷದಲ್ಲಿ 32 ಟೀ ಶರ್ಟ್ ಧರಿಸಿದ್ದು ದಾಖಲೆಯಾಗಿದೆ. ಈ ಹಿಂದೆ 31 ಟೀ ಶರ್ಟ್ ಧರಿಸಿದ್ದು ದಾಖಲೆಯಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...