alex Certify ‘ಕೊರೊನಾ’ ಹೆಸರಿನಿಂದಾಗಿ ಬೇಡ ಇವನ ಫಜೀತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಹೆಸರಿನಿಂದಾಗಿ ಬೇಡ ಇವನ ಫಜೀತಿ….!

ಹೆಸರಿನಲ್ಲೇನಿದೆ ಎಂದಿರಾ? ಕೊರೋನಾಗೆ ಬಹಳ ಹತ್ತಿರವಾದ ಹೆಸರಾಗಿದ್ದರೆ ಎಲ್ಲವೂ ಇದೆ ಅನ್ನಿ.

ಬ್ರಿಟನ್‌ನ 38 ವರ್ಷದ ತಂದೆಯೊಬ್ಬರ ಹೆಸರು ನಾವೆಲ್ ಕೊರೋನಾ ವೈರಸ್ ಹಬ್ಬಲು ಶುರುವಾದಾಗಿನಿಂದ ಭಾರೀ ಸದ್ದು ಮಾಡುತ್ತಿದೆ. ತಮ್ಮ ಹೆಸರು ನಿಜವಾಗಿಯೂ ಇದೇ ಎಂದು ಖಾತ್ರಿ ಮಾಡಲೆಂದೇ ತಾವು ಎಲ್ಲೆಡೆ ಈ ಸಂಬಂಧ ಸಾಕ್ಷಿಯೊಂದನ್ನು ಹಿಡಿದುಕೊಂಡು ಹೋಗುವಂತಾಗಿದೆ ಎನ್ನುತ್ತಾರೆ ಜಿಮ್ಮಿ ಕೊರೋನಾ.

ನಿರ್ಮಾಣ ಕಾರ್ಮಿಕರಾದ ಜಿಮ್ಮಿ ಕೊರೋನಾ ಯಾವಾಗಲೂ ತಮ್ಮ ಐಡಿ ಪ್ರೂಫ್‌ ಅನ್ನು ಜೊತೆಯಲ್ಲೇ ಕೊಂಡೊಯ್ಯುವಂತಾಗಿದೆ. ಖುದ್ದು ತಮ್ಮ ಮಗ ಹುಟ್ಟಿದಾಗ ಆತನನ್ನು ನೋಡಲು ಆಸ್ಪತ್ರೆಗೆ ತೆರಳಿದ್ದ ಜಿಮ್ಮಿ ಕೊರೋನಾ ತಮ್ಮ ಹೆಸರನ್ನು ಹೇಳಿದಾಗ ಅಲ್ಲಿದ್ದ ಮೆಡಿಕ್ಸ್‌ ಇದನ್ನು ನಂಬಲು ಸಿದ್ಧರಿರಲಿಲ್ಲ.

ಅಂದ ಹಾಗೆ ಇಂಗ್ಲಿಷ್‌ನಲ್ಲಿ ಇವರ ಹೆಸರನ್ನು ಬರೆದಾಗ Korona ಎಂದಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...