alex Certify ಈ ಬೆಕ್ಕಿನ ಫೀಲ್ಡಿಂಗ್‌ ನೋಡಿ ಬೆರಗಾಗಿದ್ದಾರೆ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬೆಕ್ಕಿನ ಫೀಲ್ಡಿಂಗ್‌ ನೋಡಿ ಬೆರಗಾಗಿದ್ದಾರೆ ನೆಟ್ಟಿಗರು…!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಲಿ ವೀಕ್ಷಕ ವಿವರಣೆಕಾರ ಡೆನ್ ಜೊನ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬೆಕ್ಕೊಂದರ ಫೀಲ್ಡಿಂಗ್ ವಿಡಿಯೋ ಹಾಕಿದ್ದು, ಸಖತ್ ಫೇಮಸ್ ಆಗಿದೆ.‌

ಯುವತಿಯೊಬ್ಬಳು ಗಾಲ್ಫ್ ಸ್ಟಿಕ್ ಹಿಡಿದು ಒಂದಾದ ನಂತರ ಇನ್ನೊಂದು ಬಾಲ್ ಗಳನ್ನು ಹೊಡೆಯುತ್ತಾಳೆ.‌ ಎದುರಿಗೆ ಕಾಯುತ್ತ ನಿಂತ ಬೆಕ್ಕು ಯಾವುದೇ ಕಷ್ಟವಿಲ್ಲದೆ ಬಾಲ್ ಗಳನ್ನು ಗಬಕ್ಕನೆ ತನ್ನ ಮುಂದಿನ ಎರಡು ಕಾಲುಗಳಲ್ಲಿ ಹಿಡಿಯುತ್ತದೆ. ನುರಿತ ಫೀಲ್ಡರ್ ನಂತೆ ಆ ಬಾಲ್ ಅಲ್ಲಿಯೇ ಬಿಟ್ಟು ಮತ್ತೊಂದು ಬಾಲ್ ಗಾಗಿ ಕಾಯುತ್ತದೆ.‌

“ನಾನು ಅತ್ಯಂತ ಕೆಟ್ಟ ಫೀಲ್ಡರ್ ಗಳನ್ನು ನೋಡಿದ್ದೇನೆ.‌ ನಾನು ನಿನಗೆ ಭರವಸೆ ನೀಡುತ್ತೇನೆ” ಎಂದು ಕ್ಯಾಪ್ಶನ್ ನೀಡಿದ್ದಾರೆ.‌ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 1,300 ಜನ. ರೀ ಟ್ವೀಟ್ ಮಾಡಿದ್ದಾರೆ.‌ 7 ಸಾವಿರಕ್ಕೂ ಅಧಿಕ ಜನ‌ ಇಷ್ಟಪಟ್ಟಿದ್ದಾರೆ.‌ ಒಬ್ಬ ವೀಕ್ಷಕ “ಬೆಕ್ಕನ್ನು ಕ್ರಿಕೆಟ್ ತಂಡದ ಕೋಚ್ ಮಾಡಬೇಕು” ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...