alex Certify ಬಿಗ್‌ ನ್ಯೂಸ್: ಕನ್ನಡಕಧಾರಿಗಳಿಗೆ ಅಷ್ಟು ಸುಲಭವಾಗಿ ಬರಲ್ವಂತೆ ‌ʼಕೊರೊನಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಕನ್ನಡಕಧಾರಿಗಳಿಗೆ ಅಷ್ಟು ಸುಲಭವಾಗಿ ಬರಲ್ವಂತೆ ‌ʼಕೊರೊನಾʼ

ಕೊರೊನಾ ನಿಯಂತ್ರಣಕ್ಕಾಗಿ ಇಡೀ ಪ್ರಪಂಚ ಹರಸಾಹಸಪಡುತ್ತಿದೆ. ಒಂದೆಡೆ ಔಷಧಿ, ಚಿಕಿತ್ಸೆಗಾಗಿ ಸಂಶೋಧನೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಮುನ್ನೆಚ್ಚರಿಕಾ ಕ್ರಮ ವಹಿಸುವ ಬಗ್ಗೆಯೂ ಸರ್ಕಾರಗಳು ಮಾರ್ಗಸೂಚಿ ಪ್ರಕಟಿಸುತ್ತಲೇ ಬರುತ್ತಿದೆ. ಅದರ ಪಾಲನೆಗೂ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಸೀನುವುದು, ಕೆಮ್ಮುವುದು ಇತ್ಯಾದಿಗಳನ್ನು ಮಾಡುವುದರಿಂದ ಹೊರಬರುವ ದ್ರವದ ಮೂಲಕ ವೈರಾಣು ಹರಡುವ ಸಾಧ್ಯತೆ ಇದೆ. ಹೀಗಾಗಿ ಬಾಯಿ, ಮೂಗು ಮುಚ್ಚುವ ರೀತಿಯಲ್ಲಿ ಮಾಸ್ಕ್ ಧರಿಸಬೇಕು ಎಂಬ ನಿಯಮ ಮಾಡಲಾಗಿದೆ.

ಆಗಾಗ ಸಾಬೂನಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಿಕೊಳ್ಳುವುದಕ್ಕೂ ಆದ್ಯತೆ ನೀಡಲಾಗಿದೆ. ಸೋಂಕು ನಿವಾರಕಗಳ ಸಿಂಪಡಣೆಯನ್ನೂ ಮಾಡಲಾಗುತ್ತಿದೆ.

ಇದೆಲ್ಲದರ ನಡುವೆ ಕೊರೊನಾ ವೈರಾಣು ಸೋಂಕಿನ ತವರಾದ ಚೀನಾದಲ್ಲಿ ಹೊಸದಾದ ಸಂಶೋಧನೆಯೊಂದು ನಡೆದಿದ್ದು, ಇದರ ಪ್ರಕಾರ ಕನ್ನಡ ಧರಿಸುವವರಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆಯಂತೆ.

ಸುಯ್ಜೋ ನಗರದಲ್ಲಿನ ಆಸ್ಪತ್ರೆಯ ನೇತ್ರಶಾಸ್ತ್ರ ಕುರಿತ ಪತ್ರಿಕೆಯಲ್ಲಿ ಈ ಕುರಿತ ಸಂಶೋಧನಾ ಪ್ರಬಂಧ ಪ್ರಕಟವಾಗಿದ್ದು, ಕಣ್ಣಿಗೆ ರಕ್ಷೆಯಾಗಿ ಕನ್ನಡಕ ಇರುವುದರಿಂದಲೇ ಇಂತಹವರಿಗೆ ಸೋಂಕು ಅಷ್ಟು ಬೇಗ ತಗಲುತ್ತಿಲ್ಲ.

ಕಳೆದ ಜ.27 ರಿಂದ ಮಾ.13 ರವರೆಗೆ 276 ಕೊರೋನಾ ಸೋಂಕಿತರನ್ನು ಸಂಶೋಧನೆಗೆ ಒಳಪಡಿಸಿದ್ದು, ಆಗ ಈ ಸತ್ಯಾಂಶ ಬಯಲಾಗಿದೆ. ಕನ್ನಡಕ ಇರುವುದರಿಂದ ಆಗಾಗ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳುವ ರೂಢಿ ಕಡಿಮೆ ಇರುತ್ತದೆ. ಹೀಗಾಗಿ ಸೋಂಕು ಹರಡುವ ಸಾಧ್ಯತೆಯೂ ಕಡಿಮೆ ಇರುತ್ತದೆ ಎನ್ನುತ್ತಾರೆ ನೇತ್ರತಜ್ಞರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...