alex Certify ಬಾಂಬ್‌ ಬ್ಲಾಸ್ಟ್‌ನಲ್ಲಿ ಬದುಕುಳಿದ ಬಾಲೆ ಈಗ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಟಾಪರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಬ್‌ ಬ್ಲಾಸ್ಟ್‌ನಲ್ಲಿ ಬದುಕುಳಿದ ಬಾಲೆ ಈಗ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಟಾಪರ್

Two Years after Escaping Blast at her Tuition Centre, Afghan Girl Tops National Exam

ತಾನು ಇದ್ದ ಟ್ಯೂಷನ್ ಮನೆ‌ ಬಳಿ ಬಾಂಬ್ ಸ್ಫೋಟ ಸಂಭವಿಸಿ ಎರಡು ವರ್ಷಗಳಾದ ಬಳಿಕ ರಾಷ್ಟ್ರೀಯ ವಿವಿಯ ಪ್ರವೇಶ ಪರೀಕ್ಷೆಯಲ್ಲಿ ಅಫ್ಘಾನಿಸ್ತಾನ ಶಮೀಶಿಯಾ ಟಾಪರ್‌ ಆಗಿದ್ದಾಳೆ.

18 ವರ್ಷದ ಶಮೀಶಿಯಾ ಪರೀಕ್ಷೆಯಲ್ಲಿ 353/360 ಅಂಕಗಳಿದ್ದು, ಭಾಗಿಯಾಗಿದ್ದ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾಥಿಗಳ ಪೈಕಿ ಮೊದಲಿಗಳಾಗಿದ್ದಾಳೆ. ಈ ಸುದ್ದಿಯನ್ನು ಟಿವಿಯಲ್ಲಿ ನೋಡಿದ ಶಮೀಶಿಯಾ ತಾಯಿ ತನ್ನ ಮಗಳಿಗೆ ಸಂತಸದಿಂದ ವಿಚಾರ ಹಂಚಿಕೊಂಡಾಗ ಆಕೆ ಮೊದಲಿಗೆ ನಂಬಿರಲಿಲ್ಲವಂತೆ. “ಆಕೆಯ ನಗು ನನ್ನ ದಿನವನ್ನು ಹಸನಾಗಿಸಿದೆ. ಇಡೀ ದೇಶಕ್ಕೇ ಮೊದಲ ರ‍್ಯಾಂಕ್ ಪಡೆಯುವುದಕ್ಕಿಂತಲೂ ಇದು ಮಿಗಿಲಾದುದು” ಎಂದು ತಿಳಿಸಿದ್ದಾರೆ.

ಶಮೀಶಿಯಾ ಹಾಗೂ ಆಕೆಯ ಸಹಪಾಠಿಗಳು ಓದುತ್ತಿದ್ದ ಟ್ಯೂಷನ್‌ ಒಂದರ ಮೇಲೆ 2018ರಲ್ಲಿ ಆತ್ಮಹತ್ಯಾ ಬಾಂಬರ್‌ ಒಬ್ಬ ದಾಳಿ ಮಾಡಿದ್ದ. ಆ ವೇಳೆ ಹಾಲ್‌ನಲ್ಲಿ, ಅವಕಾಶ ವಂಚಿತರಾಗಿದ್ದ 200 ಮಕ್ಕಳು ಪಾಠ ಕೇಳುತ್ತಿದ್ದರು. ಆ ಸ್ಪೋಟದಲ್ಲಿ ಅಲ್ಲಿದ್ದ ಅರ್ಧದಷ್ಟು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಘಟನೆಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...