alex Certify ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಈ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಈ ವಿಡಿಯೋ….!

12ನೇ ಮಹಡಿಯಿಂದ ಆಯತಪ್ಪಿ ಬಿದ್ದಿದ್ದ 2 ವರ್ಷದ ಹೆಣ್ಣು ಮಗುವನ್ನ ಡೆಲಿವರಿ ಬಾಯ್​​ ಒಬ್ಬ ಸಿನಿಮೀಯ ರೀತಿಯಲ್ಲಿ ಕ್ಯಾಚ್​ ಹಿಡಿದ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ.

ಈ ಡ್ರೈವರ್​ನ್ನು 31 ವರ್ಷದ ನ್ಗುಯೆನ್ ಎನ್ಗೊಕ್ ಮಾನ್ಹ್ ಎಂದು ಗುರುತಿಸಲಾಗಿದೆ. ಈತ ತನ್ನ ವಾಹನದಲ್ಲಿ ಯಾವುದೋ ವಸ್ತುವನ್ನ ಡೆಲಿವರಿ ಮಾಡಲು ಬಂದಿದ್ದ. ಈ ವೇಳೆ 12ನೇ ಅಂತಸ್ತಿನ ಬಾಲ್ಕನಿಯಲ್ಲಿದ್ದ ಈ ಮಗು ಕೆಳಗೆ ಬೀಳ್ತಿರೋದನ್ನ ಕಂಡ ಡ್ರೈವರ್​ ಹಿಂದೆ ಮುಂದೆ ಯೋಚಿಸದೇ ಮಗುವನ್ನ ಕ್ಯಾಚ್​ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.

ವಿಡಿಯೋದಲ್ಲಿ ಬಾಲಕಿ ಬಾಲ್ಕನಿಯಿಂದ ಬೀಳುತ್ತಿರೋದನ್ನ ನೋಡಬಹುದಾಗಿದೆ. ಡ್ರೈವರ್​ ಆಕೆಯನ್ನ ಕ್ಯಾಚ್​ ಹಿಡಿಯಲು ಸಿದ್ಧನಿದ್ದ. ಆದರೆ ಆತ ಕ್ಯಾಚ್​ ಹಿಡಿದ ಕ್ಷಣ ಸೆರೆಯಾಗಿಲ್ಲ. ಸ್ಥಳೀಯ ವರದಿಗಳು ನೀಡಿದ ಮಾಹಿತಿ ಪ್ರಕಾರ ಆ ಮಗು 164 ಅಡಿ ಎತ್ತರದಿಂದ ಕೆಳಕ್ಕೆ ಬಂದಿದೆ ಎನ್ನಲಾಗಿದೆ. ಈ ಎದೆ ಝಲ್​ ಎನ್ನಿಸುವ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...