alex Certify ಸಿಂಗಾಪುರ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಗಾಪುರ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್..!

ಸಿಂಗಾಪುರಕ್ಕೆ ಆಗಮಿಸಲಿರುವ ಪ್ರವಾಸಿಗರು ದೇಶದಲ್ಲಿ ತಂಗಿದ್ದ ಅವಧಿಯಲ್ಲಿ  ಇನ್ಮೇಲೆ 30 ಸಾವಿರ ಸಿಂಗಾಪುರ ಡಾಲರ್​ ಮೌಲ್ಯದ ವಿಮೆಯನ್ನ ಖರೀದಿಸಬಹುದಾಗಿದೆ. ಚಾಂಟಿ ಏರ್​ಪೋರ್ಟ್ ಗ್ರೂಪ್​ ಹಾಗೂ ಸಿಂಗಾಪುರ ಪ್ರವಾಸೋದ್ಯಮ ಮಂಡಳಿ ವಿಮಾ ಯೋಜನೆ ಬಗ್ಗೆ ಜಂಟಿ ಹೇಳಿಕೆ ನೀಡಿವೆ .

ಸಿಂಗಾಪುರದಲ್ಲಿ ತಂಗಿರುವ ಪ್ರವಾಸಿಗರು ದೇಶದಲ್ಲಿ ಇದ್ದ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ಒಳಗಾದಲ್ಲಿ ಈ ವಿಮೆಯ ಅಡಿಯಲ್ಲಿ ಅವರ ಚಿಕಿತ್ಸಾ ವೆಚ್ಚವನ್ನ ಭರಿಸಲಾಗುತ್ತೆ. ಆರೋಗ್ಯ ಸಚಿವಾಲಯದ ಶಿಫಾರಸ್ಸಿನ ಮೇಲೆ ಈ ಕನಿಷ್ಟ ವ್ಯಾಪ್ತಿ ಮೊತ್ತವನ್ನ ನಿರ್ಧರಿಸಲಾಗಿದೆ. ಖಾಸಗಿ ಆಸ್ಪತ್ರೆಯ ಕೋವಿಡ್​ ಬಿಲ್​ಗೂ ಈ ವಿಮೆ ಅನ್ವಯವಾಗಲಿದೆ.

ಎಐಜಿ ಏಷ್ಯಾ ಪೆಸಿಫಿಕ್​​ ಇನ್ಶುರೆನ್ಸ್, ಚುಬ್​ ಇನ್ಶುರೆನ್ಸ್​ ಸಿಂಗಾಪುರ ಲಿಮಿಟೆಡ್​ ಹಾಗೂ ಹೆಚ್​ಎಎಲ್​​ ಅಶ್ಯೂರೆನ್ಸ್ ಎಐಜಿ ಈ ವಿಮಾ ರಕ್ಷಣೆ ಒದಗಿಸುವ ಕಂಪನಿಗಳಾಗಿವೆ. ನವೆಂಬರ್​ 27ರಿಂದ ಈ ವಿಮೆ ಲಭ್ಯವಿರಲಿದೆ ಅಂತಾ ವರದಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...