alex Certify ಮೊಗದಲ್ಲಿ ನಗು ಮೂಡಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಗದಲ್ಲಿ ನಗು ಮೂಡಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ನಾಯಿ ಮರಿ ಎಂದರೆ ಯಾರಿಗೆ ಪ್ರೀತಿಯಿಲ್ಲ. ಅದರಲ್ಲೂ ಮಕ್ಕಳಿಗೆ ಅವುಗಳನ್ನು ಕಂಡರೆ ಎಲ್ಲಿಲ್ಲದ ಮುದ್ದು. ಟ್ವಿಟ್ಟರ್ ನಲ್ಲಿ ಎರಡು ದಿನಗಳಿಂದ ನಾಯಿ ಮರಿಗಳು ಹಾಗೂ ಮಗುವೊಂದು ಆಡುವ ಚಿತ್ರ ಫುಲ್ ಫೇಮಸ್ ಆಗಿಬಿಟ್ಟಿದೆ.

@HopkinsBRFC ಎಂಬ ಟ್ವಿಟರ್ ಖಾತೆಯಲ್ಲಿ ಫೆ. 24 ರಂದು ಅಪ್ ಲೋಡ್ ಆದ 36 ಸೆಕೆಂಡ್ ಗಳ ವಿಡಿಯೋವೊಂದು ಎರಡೇ ದಿನದಲ್ಲಿ 6 ಸಾವಿರ ವೀಕ್ಷಣೆ, ನೂರಾರು ಉತ್ತಮ ಕಮೆಂಟ್ ಪಡೆದಿದೆ.

ಲಗೇಜ್​ ಇಲ್ಲದೆ ವಿಮಾನಯಾನ ಕೈಗೊಳ್ಳುವವರಿಗೆ ಗುಡ್​ ನ್ಯೂಸ್​..!

ಇನ್ನೂ ಅಂಬೆಗಾಲಿಡುವ ಮಗುವೊಂದು ನೆಲದ ಮೇಲೆ ಕುಳಿತಿದೆ. ಎರಡು ಪುಟ್ಟ ನಾಯಿ ಮರಿಗಳು ಮಗುವಿನ ಮೈಮೇಲೆಲ್ಲ ಹತ್ತಿ, ನೆಕ್ಕಿ ಕಚ್ಚಿದಂತೆ ಮಾಡಿ ಆಟವಾಡುತ್ತವೆ. ಮಗು ಕೂಡ ಸ್ವಲ್ಪವೂ ಹೆದರದೇ ಕಚಗುಳಿ ಇಟ್ಟಂತೆ ನಗುತ್ತದೆ. “ಈ ವಿಡಿಯೋ ನಿಮ್ಮ‌ ಮುಖದಲ್ಲಿ ನಗು ಮೂಡಿಸುತ್ತದೆ” ಎಂದು ಕ್ಯಾಪ್ಶನ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...