alex Certify ಇಲ್ಲಿದೆ ಮೈಕ್ರೊವೇವ್ ಓವನ್ ಸ್ವಚ್ಛ ಮಾಡುವ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಮೈಕ್ರೊವೇವ್ ಓವನ್ ಸ್ವಚ್ಛ ಮಾಡುವ ಸುಲಭ ವಿಧಾನ

ಕರೊನಾ ವೈರಸ್ ಭಯ ಜನರಲ್ಲಿ ಸ್ವಚ್ಛತೆಯ ಮನೋಭಾವ ಹೆಚ್ಚಲು ಕಾರಣವಾಗಿದೆ. ಮನೆಯ ಪ್ರತಿ ವಸ್ತುವನ್ನು ಎಷ್ಟು ಸ್ವಚ್ಛ ಮಾಡಿದರೂ ಇನ್ನೂ ಎಲ್ಲಾದರೂ ವೈರಸ್ ಉಳಿದೀತೇನೋ ಎಂಬ ಅನುಮಾನ ಇದ್ದೇ ಇರುತ್ತದೆ. ಕೆಲ ವಸ್ತುಗಳ ಸ್ವಚ್ಛತೆ ಕಷ್ಟದ ಕೆಲಸವಾಗಿದೆ.

ಅದರಲ್ಲಿ ಮನೆಯ ಅತಿ ಅವಶ್ಯ ವಸ್ತು ಮೈಕ್ರೊವೇವ್ ಓವನ್ ಕೂಡ ಒಂದು. ಅದನ್ನು ಸ್ವಚ್ಛ ಮಾಡುವುದು ಸವಾಲೇ ಸರಿ. ಎಷ್ಟೇ ಪ್ರಯತ್ನ ಮಾಡಿದರೂ ಒಳಗಡೆ ಎಲ್ಲೋ ಮೂಲೆಯಲ್ಲಿ ಒಂದು ತುಣುಕು ಉಳಿದು ಬಿಡುತ್ತದೆ. ಮಮಾ‌ಮಿಲಾ ಎಂಬ ಟಿಕ್ ಟಾಕರ್ ಮಾಡಿದ ವಿಡಿಯೋ‌ ಮೈಕ್ರೋವೇವ್ ಸುಲಭವಾಗಿ ಸ್ವಚ್ಛ ಮಾಡುವ ವಿಧಾನ‌ ತಿಳಿಸಿಕೊಟ್ಟಿದೆ.‌

ಒಂದು‌ ಬೌಲ್‌ ನೀರಿಗೆ ಒಂದು ಚಮಚ ಲಿಕ್ವಿಡ್ ಡಿಟರ್ಜಂಟ್ ಹಾಕಿ ಕಲಕಿ ಬೌಲ್ ನ್ನು ಓವೆನ್ ನಲ್ಲಿ ಇಟ್ಟು ನಾಲ್ಕು‌ ನಿಮಿಷ ಆನ್ ಮಾಡಿಡಬೇಕು. ಇದರಿಂದ ಓವನ್ ‌ನಲ್ಲಿ ಆರ್ದ್ರತೆ ಸೃಷ್ಟಿಯಾಗುತ್ತದೆ. ನಂತರ ಒಂದು ಬಟ್ಟೆಯಿಂದ ಉದ್ದಿದರೆ ಅವಶೇಷಗಳು ಉಳಿಯದೆ ಓವೆನ್ ಸಂಪೂರ್ಣ ಸ್ವಚ್ಛವಾಗುತ್ತದೆ.‌ ಈ ಟಿಕ್ ಟಾಕ್ ವಿಡಿಯೋ‌ಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...