alex Certify ಥೆರಪಿ ಶ್ವಾನಕ್ಕೆ ಆಸ್ಪತ್ರೆ ಸಿಬ್ಬಂದಿಯಿಂದ ಅದ್ಧೂರಿ ಬೀಳ್ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೆರಪಿ ಶ್ವಾನಕ್ಕೆ ಆಸ್ಪತ್ರೆ ಸಿಬ್ಬಂದಿಯಿಂದ ಅದ್ಧೂರಿ ಬೀಳ್ಕೊಡುಗೆ

ಅಮೆರಿಕದ ವೈದ್ಯಕೀಯ ಕೇಂದ್ರವೊಂದರಲ್ಲಿ ಸೆರೆ ಹಿಡಿಯಲಾದ ಚಿತ್ರಗಳು ಇತ್ತೀಚೆಗೆ ಸಖತ್‌ ವೈರಲ್ ಆಗಿವೆ. ಥೆರಪಿ ಶ್ವಾನ ಟಸ್ಸಿಗೆ ಅದ್ಧೂರಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದ ಕೇಂದ್ರದ ಸಿಬ್ಬಂದಿ, ಈ ಕ್ಷಣಗಳ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

ಆಸ್ಪತ್ರೆಯ ಸ್ವಯಂಸೇವಕ ಗೇರಿ ಅಜೆವೆಡೋ ಜೊತೆಗೆ ಹೆಜ್ಜೆ ಹಾಕುತ್ತಿರುವ ಟಾಸ್ಸಿಗೆ ಅಕ್ಕಪಕ್ಕ ನೆರೆದ ಅಲ್ಲಿನ ಸಿಬ್ಬಂದಿ ಮೆಚ್ಚುಗೆಯ ಚಪ್ಪಾಳೆಗಳ ಮೂಲಕ ಬೀಳ್ಕೊಟ್ಟಿದ್ದಾರೆ. ಟಾಸ್ಸಿ ಈ ಆಸ್ಪತ್ರೆಯಲ್ಲಿ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಅನುಮತಿಯಿಲ್ಲದೆ ಫೋಟೋ ಕ್ಲಿಕ್ಕಿಸಿದವನಿಗೆ ಯುವತಿಯರಿಂದ ಹಿಗ್ಗಾಮುಗ್ಗಾ ತರಾಟೆ​..!

12 ವರ್ಷ ವಯಸ್ಸಿನ ಟಾಸ್ಸಿ ತಾನು ಆಸ್ಪತ್ರೆಯಲ್ಲಿದ್ದಷ್ಟೂ ದಿನ ತನ್ನ ಮೃದು ಸ್ವಭಾವದಿಂದ ಎಲ್ಲರ ಹೃದಯ ಗೆದ್ದಿದ್ದು, ಇದೀಗ ತನ್ನ ನಿವೃತ್ತ ಜೀವನವನ್ನು ಸುಖಕರವಾಗಿ ನಡೆಸಲಿ ಎಂದು ಆಸ್ಪತ್ರೆಯ ಸಿಬ್ಬಂದಿ ಹಾರೈಸಿ, ಆಕೆಗೆ ಬೀಳ್ಕೊಟ್ಟಿದ್ದಾರೆ.

It was a very special day at Doctors Medical Center in honor of National Therapy Animal Day! One of our longtime Service…

Posted by Doctors Medical Center on Friday, April 30, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...