alex Certify ಸಂಸತ್‌ ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದ ಸಂಸದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸತ್‌ ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದ ಸಂಸದ

ಥಾಯ್ಲೆಂಡ್‌ ಸಂಸತ್ತಿನ ಅಧಿವೇಶನದ ವೇಳೆ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದ ಸಂಸದರೊಬ್ಬರು ಸಿಕ್ಕಿಬಿದ್ದಿದ್ದಾರೆ. ಬಜೆಟ್‌ ಅಧಿವೇಶನದ ಮಧ್ಯೆಯೇ 10 ನಿಮಿಷಗಳ ಕಾಲ ನೀಲಿ ಚಿತ್ರ ವೀಕ್ಷಿಸುತ್ತಿದ್ದ Ronnathep Anuwat‌ ತಮ್ಮ ಫೇಸ್ ಮಾಸ್ಕ್ ‌ಅನ್ನೂ ತೆಗೆದು ಬಹಳ ತಲ್ಲೀನರಾಗಿ ಸ್ಕ್ರೀನ್ ನೋಡುತ್ತಿದ್ದರು.

ಆಡಳಿತಾರೂಢ Palang Pracharath‌ ಪಕ್ಷದ ಸದಸ್ಯರಾದ Ronnathep Anuwat‌ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಪುಂಡರು ಹುಡುಗಿಯೊಬ್ಬಳನ್ನು ಕಿಡ್ನಾಪ್ ಮಾಡಿ, ಆಕೆಗೆ ಬೆದರಿಕೆಯೊಡ್ಡಿ ಕಿರುಕುಳ ಕೊಡುತ್ತಿದ್ದ ವಿಡಿಯೋವನ್ನು ತಾವು ನೋಡುತ್ತಿದ್ದದ್ದಾಗಿ ತಿಳಿಸಿದ್ದಾರೆ. ಸಹಾಯ ಕೇಳುತ್ತಿದ್ದ ಆ ಮಹಿಳೆಗೆ ಸ್ಪಂದಿಸುವ ಆಲೋಚನೆ ಮಾಡುತ್ತಿದ್ದದ್ದಾಗಿ ಹೇಳಿದ್ದಾರೆ.

ಆದರೆ 10 ನಿಮಿಷಗಳ ವಿಡಿಯೋದ ಕೊನೆಯ ಭಾಗದಲ್ಲಿ ಆ ಮಹಿಳೆ ಕಾಸು ಕೇಳುತ್ತಿದ್ದದ್ದನ್ನು ನೋಡಿದ್ದಾಗಿ ಸಂಸದರು‌ ತಿಳಿಸಿದ್ದಾರೆ. ಇದೆಲ್ಲಾ ನೋಡಿದ ಬಳಿಕ ತಮ್ಮ ಮೊಬೈಲ್‌ನಲ್ಲಿದ್ದ ಕಂಟೆಂಟ್ ‌ಅನ್ನು ಡಿಲೀಟ್ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...