alex Certify 1938 ರ ಸೂಪರ್‌ಮ್ಯಾನ್ ಕಾಮಿಕ್ ಬರೋಬ್ಬರಿ 24 ಕೋಟಿ ರೂ.ಗಳಿಗೆ ಹರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1938 ರ ಸೂಪರ್‌ಮ್ಯಾನ್ ಕಾಮಿಕ್ ಬರೋಬ್ಬರಿ 24 ಕೋಟಿ ರೂ.ಗಳಿಗೆ ಹರಾಜು

ಕಾಮಿಕ್ಸ್ ಹೀರೋ ಸೂಪರ್‌ಮ್ಯಾನ್‌ ಅನ್ನು ಜಗತ್ತಿಗೆ ಪರಿಚಯಿಸಿದ 1938ರ ಪುಸ್ತಕವೊಂದು ಆನ್ಲೈನ್ ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಹರಾಜಾಗಿದೆ.

ಆಕ್ಷನ್ ಕಾಮಿಕ್ಸ್‌ನ ಅತ್ಯಂತ ಅಪರೂಪದ ಈ ಪುಸ್ತಕ $3.25 ದಶಲಕ್ಷಕ್ಕೆ (24 ಕೋಟಿ ರೂಪಾಯಿ) ಕಾಮಿಕ್‌ಕನೆಕ್ಟ್‌.ಕಾಮ್ ಎಂಬ ಆನ್ಲೈನ್ ತಾಣದಲ್ಲಿ ಬಿಕರಿಯಾಗಿದೆ. 2014ರಲ್ಲಿ $3.2 ದಶಲಕ್ಷಕ್ಕೆ ಮಾರಾಟವಾಗಿದ್ದ ಮತ್ತೊಂದು ಕಾಮಿಕ್ ಪುಸ್ತಕದ ದಾಖಲೆಯನ್ನು ಈ ಪುಸ್ತಕ ಮುರಿದಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ 5 ದಿನ ಮಳೆ

ಈ ಕಾಮಿಕ್ ಸೂಪರ್‌‌ಹೀರೋ ಜಾನ್ರ್‌ನ ಆರಂಭವಾಗಿದ್ದು, 1938ರಲ್ಲಿ ಪ್ರಕಟಣೆಗೊಂಡ ಬಳಿಕ ಸಹಸ್ರಾರು ಪ್ರತಿಗಳು ಮಾರಾಟವಾಗಿವೆ ಎಂದು ಕಾಮಿಕ್‌ಕನೆಕ್ಟ್‌.ಕಾಂನ ವಿನ್ಸೆಂಟ್‌ ಜುರ್ಜೋಲೋ ತಿಳಿಸಿದ್ದಾರೆ. ಸದ್ಯ ಕೇವಲ 100 ಪ್ರತಿಗಳು ಮಾತ್ರವೇ ಅದೇ ಸ್ಥಿತಿಯಲ್ಲಿದ್ದು, ಈಗ ಹರಾಜಾದ ಪ್ರತಿಯನ್ನು ಬಹಳ ಜತನದಿಂದ ಕಾಪಾಡಿಕೊಂಡು ಬರಲಾಗಿದೆ ಎಂದಿದ್ದಾರೆ ಜೊರ್ಜೋಲೋ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...