alex Certify ಶ್ವಾನದ ಜೀವ ಉಳಿಯಲು ಕಾರಣವಾಯ್ತು ಯುವಕನ ಸಮಯಪ್ರಜ್ಞೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಜೀವ ಉಳಿಯಲು ಕಾರಣವಾಯ್ತು ಯುವಕನ ಸಮಯಪ್ರಜ್ಞೆ

ಹೃದಯಾಘಾತವಾಗಿ ಬಿದ್ದಿದ್ದ ನಾಯಿಗೆ ತುರ್ತು ಚಿಕಿತ್ಸೆ ನೀಡುವ ಮೂಲಕ ಚುರುಕು ಬುದ್ದಿಯ ಯುವಕನೊಬ್ಬ ಅದರ ಜೀವ ಉಳಿಸಿದ್ದಾನೆ‌.‌

ಪಶ್ಚಿಮ ಬ್ರೆಜಿಲ್ ನ ಫಿರಾನಾ ನಗರದ ಪಶು ಚಿಕಿತ್ಸೆ ತರಬೇತಿ ಪಡೆಯುತ್ತಿರುವ 19 ವರ್ಷದ ಲುಕಾಸ್ ಮಾರ್ಟೀನ್ ನಾಯಿಗೆ ನೀಡಿದ ಪ್ರಥಮ‌ ಚಿಕಿತ್ಸೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮನೆಯ ಹೊರಗೆ ಬೀದಿಯಲ್ಲಿ ನಾಯಿಯೊಂದು ಅಲ್ಲಾಡದೇ ಬಿದ್ದಿರುವುದನ್ನು ಮಾರ್ಟಿನ್ ನೋಡಿದ್ದಾರೆ. ನಾಯಿ ಉಸಿರಾಡುತ್ತಿರುವುದನ್ನು ಗಮನಿಸಿದ‌ ಅವರು, ತಕ್ಷಣ ಯಾರ ಸಹಾಯವೂ ಇಲ್ಲದೆ, ನಾಯಿಗೆ ಕಾರ್ಡಿಯೋ ಪಲ್ಮನರಿ ರೆಸುಸ್ಟೇಷನ್ (ಸಿಪಿಆರ್) ಚಿಕಿತ್ಸೆ ಪ್ರಾರಂಭಿಸಿದ್ದಾರೆ.

ನಾಯಿಯ ಉಸಿರಾಟದ ನಾಳಗಳನ್ನು ಶುದ್ಧ ಮಾಡಿದ್ದು, ಬಳಿಕ ನಾಯಿ ಸ್ವಲ್ಪ ವಾಂತಿ ಮಾಡಿದೆ. ಅದರ ಹೃದಯ ಇರುವ ಭಾಗದಲ್ಲಿ ಸುಮಾರು ಐದು ನಿಮಿಷ ಮಾರ್ಟಿನ್ ಎರಡೂ ಕೈಗಳಿಂದ ಒತ್ತಿದ್ದಾರೆ. ನಂತರ‌ ನಾಯಿ ಚೇತರಿಸಿಕೊಂಡು ಓಡಾಡಲು ಪ್ರಾರಂಭಿಸಿದೆ.‌

ನಾನು ಮನೆಯಲ್ಲಿ ಆನ್ ಲೈನ್ ಕ್ಲಾಸ್ ನಲ್ಲಿದ್ದಾಗ ನಾಯಿಯ ಸುತ್ತ ಜನ ತುಂಬಿದ್ದನ್ನು ನೋಡಿದೆ. ಅದು ಯಾವುದೋ ವಿಷ ಪದಾರ್ಥ ಸೇವಿಸಿ ಬಿದ್ದಿರಬಹುದು ಎಂದುಕೊಂಡೆ. ಒಮ್ಮೆ ನಮ್ಮ ಮನೆಯ ನಾಯಿಯೂ ಇದೇ ರೀತಿ ಅನಾರೋಗ್ಯಕ್ಕೆ ಈಡಾಗಿತ್ತು. ಆದರೆ, ನಾಯಿಗೆ ಹೃದಯಾಘಾತವಾಗಿದೆ ಎಂಬುದು ನಂತರ ಗೊತ್ತಾಯಿತು ಎಂದು ಮಾರ್ಟಿನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...