alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶಿಷ್ಟ ರೀತಿಯಲ್ಲಿ Stay home ಸಂದೇಶ ನೀಡಿದ ಪೈಲೆಟ್

ವಿಶ್ವದ ಬಹುತೇಕ ರಾಷ್ಟ್ರಗಳನ್ನು ಬಾಧಿಸಿರುವ ಕರೋನಾವನ್ನು ತಡೆಯಲು ಇರುವ ಒಂದೇ ದಾರಿಯೆಂದರೆ ಅದು ಸಮಾಜದಿಂದ ದೂರ ಉಳಿಯುವುದು. ಅದಕ್ಕಾಗಿ ನೂರಕ್ಕೂ ಹೆಚ್ಚು ದೇಶಗಳು ಈಗಾಗಲೇ ಲಾಕ್‌ಡೌನ್ ಘೋಷಿಸಿವೆ. ಇದಕ್ಕೆ ಆಸ್ಟ್ರಿಯಾನೂ ಹೊರತಲ್ಲ.

ಲಾಕ್‌ಡೌನ್ ಘೋಷಣೆಯನ್ನು ಅನೇಕರು ಹಲವು ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದಾರೆ. ಆದರೆ ಆಸ್ಟ್ರಿಯದ ಪೈಲೆಟ್ ಒಬ್ಬರು ವಿಭಿನ್ನ ರೀತಿಯಲ್ಲಿ ಈ ಕೆಲಸವನ್ನು ಮಾಡಿದ್ದಾರೆ.

ಹೌದು, ಆಸ್ಟ್ರಿಯಾದ ಅನಾಮಧೇಯ ಪೈಲೆಟ್ ಒಬ್ಬರು stay safe ಎಂಬ ಅಕ್ಷರಗಳು ಮೂಡುವ ರೀತಿ ತಮ್ಮ ವಿಮಾನ ಹಾರಾಟವನ್ನು ನಡೆಸಿದ್ದಾರೆ. ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರು ಮನೆಯಿಂದಾಚೆ ಬರದಂತೆ ಮನವಿ ಮಾಡಿದ್ದಾರೆ.

ಇದಕ್ಕಾಗಿ ಪೈಲೆಟ್ ಸಿಂಗಲ್ ಎಂಜಿನ್ ವಿಮಾನವನ್ನು ಬಳಸಿದ್ದಾರೆ ಎನ್ನಲಾಗಿದೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪೈಲೆಟ್ ಎಲ್ಲರಿಗೂ ಮನೆಯಲ್ಲಿರುವಂತೆ ಹೇಳಿ, ಅವರು ಹಾರಾಟ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಆದರೆ ಪೈಲೆಟ್ ನಡೆಯನ್ನು ಅನೇಕರು ಸಮರ್ಥಿಸಿಕೊಂಡಿದ್ದಾರೆ

ಇನ್ನು ಆಸ್ಟ್ರಿಯದಲ್ಲಿ ಈಗಾಗಲೇ ಕರೋನಾ ಪೀಡಿತರ ಸಂಖ್ಯೆ 5 ಸಾವಿರ ಗಡಿ ದಾಟಿದ್ದು, 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...