ಲೈವ್ ಪ್ಯಾನೆಲ್ ಚರ್ಚೆ ವೇಳೆ ಮೂತ್ರ ವಿಸರ್ಜನೆ ಮಾಡಿದ ದಕ್ಷಿಣ ಸುಡಾನ್ನ ರಾಜತಾಂತ್ರಿಕರೊಬ್ಬರ ನಡವಳಿಕೆಗೆ ಎಲ್ಲಡೆಯಿಂದ ಟೀಕೆ/ಅಣಕಗಳು ವ್ಯಕ್ತವಾಗಿವೆ.
ಅಮೆರಿಕದಲ್ಲಿ ದಕ್ಷಿಣ ಸುಡಾನ್ನ ರಾಯಭಾರಿಯಾಗಿರುವ ಗೋರ್ಡನ್ ಬುಯೇ, ತಮ್ಮ ಫೋನ್ನಲ್ಲಿರುವ ಕ್ಯಾಮೆರಾ ಸಕ್ರಿಯ ಇರುವಾಗಲೇ ಬಾತ್ರೂಂಗೆ ಹೋಗಿದ್ದಾರೆ. ವಿಡಿಯೋ ಫೀಡ್ ಚಾಲೂ ಆಗಿರುವಾಗಲೇ ಮೂತ್ರ ವಿಸರ್ಜನೆ ಮಾಡಲು ಶುರುವಿಟ್ಟುಕೊಂಡಿದ್ದಾರೆ.
ಕೂಡಲೇ ಸಹ ಪ್ಯಾನಲಿಸ್ಟ್ ಒಬ್ಬರು ಈ ಮುಜುಗರದ ಸನ್ನಿವೇಶವನ್ನು ಅವಾಯ್ಡ್ ಮಾಡಲು ಗೋರ್ಡನ್ ರ ವಿಡಿಯೋ ಫೀಡ್ ಅನ್ನು ಮ್ಯೂಟ್ ಮಾಡಿದ್ದಾರೆ.
ಅಷ್ಟು ದೊಡ್ಡ ಜವಾಬ್ದಾರಿಯುತ ಹುದ್ದೆಯಲ್ಲಿ ಇದ್ದುಕೊಂಡು ಗೋರ್ಡನ್ ಮಾಡಿದ ಅವಾಂತರಕ್ಕೆ ನೆಟ್ಟಿಗರಿಂದ ಭಾರೀ ಟೀಕೆಗಳು ಕೇಳಿ ಬರುತ್ತಿವೆ.