alex Certify 10 ನಿಮಿಷಗಳಲ್ಲೇ ಖಾಲಿಯಾಯ್ತು ಈ ವಿಮಾನದ ಟಿಕೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ನಿಮಿಷಗಳಲ್ಲೇ ಖಾಲಿಯಾಯ್ತು ಈ ವಿಮಾನದ ಟಿಕೆಟ್

ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹಾರಾಟವನ್ನೇ ಮಾಡದೇ ಜನರಿಗೆ ವಿಮಾನ ಪ್ರಯಾಣ ಬಹಳ ಮಿಸ್ ಆಗುತ್ತಿದೆ. ಆಸ್ಟ್ರೇಲಿಯಾದ ಕ್ವಾಂಟಾಸ್ ವಿಮಾನಯಾನ ಸಂಸ್ಥೆಯು ತನ್ನ ವಿಮಾನಗಳಲ್ಲಿ ಸೈಟ್ ಸೀಯಿಂಗ್ ಮಾಡಿಸಲು ವಿಶೇಷ ವ್ಯವಸ್ಥೆ ಮಾಡಿದೆ.

ಈ ಕಾರ್ಯಕ್ರಮಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ಎಲ್ಲ ಟಿಕೆಟ್‌ಗಳೂ ಸಹ ಹತ್ತೇ ನಿಮಿಷಗಳಲ್ಲಿ ಮಾರಾಟವಾಗಿಬಿಟ್ಟಿವೆ. $2700 ಮುಖಬೆಲೆಯ ಈ ಟಿಕೆಟ್‌ ಖರೀದಿ ಮಾಡಿಕೊಂಡು, ಕ್ವಾಂಟಾಸ್‌ನ QF787 ವಿಮಾನವನ್ನೇರಬಹುದಾಗಿದೆ.

ಈ ವಿಮಾನವು ಸಿಡ್ನಿಯ ದೇಸೀ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ, ಕ್ವೀನ್ಸ್‌ಲೆಂಡ್‌‌ & ಗೋಲ್ಡ್‌ ಕೋಸ್ಟ್‌ಗಳ ಮೇಲೆ ಹಾದು, ಕೆಳಮಟ್ಟದಲ್ಲಿ ಹಾರುತ್ತಾ ಅಲ್ಲಿನ ಹವಳ ತೀರಗಳನ್ನು ಪ್ರಯಾಣಿಕರಿಗೆ ಕಿಟಕಿಯಿಂದ ನೋಡಲು ಅನುವು ಮಾಡಿಕೊಡಲಿದೆ. ಇವೆಲ್ಲಾ ಮುಗಿಸಿಕೊಂಡು, ಮತ್ತದೇ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಗಲಿದೆ ವಿಮಾನ. ಜಗತ್ತಿನೆಲ್ಲೆಡೆ ಆಗುತ್ತಿರುವಂತೆ ಆಸ್ಟ್ರೇಲಿಯಾದಲ್ಲೂ ಸಹ ತೀವ್ರ ಆರ್ಥಿಕ ಮುಗ್ಗಟ್ಟು ನೆಲೆಸಿದ್ದು, 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಹಿಂಜರಿತ (ರಿಸೆಶನ್) ಸೃಷ್ಟಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...