alex Certify ಡೇಟಿಂಗ್‌ ನಲ್ಲಿದ್ದ ಜೋಡಿಗೆ ಮುಜುಗರ ತಂದಿಟ್ಟ ಸ್ನೇಹಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್‌ ನಲ್ಲಿದ್ದ ಜೋಡಿಗೆ ಮುಜುಗರ ತಂದಿಟ್ಟ ಸ್ನೇಹಿತ

ಅದೇ ಮೊದಲ ಡೇಟ್‌ನಲ್ಲಿದ್ದ ಜೋಡಿಯೊಂದಕ್ಕೆ ಅವರ ಸ್ನೇಹಿತರೆಲ್ಲಾ ಸೇರಿಕೊಂಡು, ಅವರಿಗೆ ನಿಶ್ಚಿತಾರ್ಥವೇ ಆಗಿ ಹೋಗಿದೆ ಎಂದು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಇದರಿಂದ ಜೋಡಿಗೆ ಬಲೇ ಇರುಸು ಮುರುಸುಂಟಾಗಿದೆ.

ಉತ್ತರ ಐರ್ಲೆಂಡ್‌ನ ನೀಲ್ ಹಾರ್ಕಿನ್‌, 31, ಹಾಗೂ ಜೀನ್ ಮ್ಯಾಕ್‌ಔಲೆ ಹೆಸರಿನ ಈ ಜೋಡಿ ತಮ್ಮ ಸ್ನೇಹಿತರು ಮಾಡಿದ ಈ ಚೇಷ್ಟೆಯಿಂದ ಉರಿದುಬಿದ್ದಿದ್ದಾರೆ. ಅವರಿಗೆಂದು, ಅವರ ಸ್ನೇಹಿತರು ಕಳುಹಿಸಿದ ದೊಡ್ಡ ಸ್ಪಾರ್ಕ್ಲರ್‌ ಸಹಿತ ಪ್ರೊಸೆಕ್ಕೋ ಒಂದನ್ನು ವೇಟರ್‌ ತಂದು ಮೇಜಿನ ಮೇಲೆ ಇಡುತ್ತಲೇ ಸುತ್ತ ಇದ್ದ ಮಂದಿಯೆಲ್ಲ ಜೋರಾಗಿ ಚಪ್ಪಾಳೆ ತಟ್ಟಿ, ಶುಭಾಶಯ ಕೋರಿದ್ದಾರೆ. ಈ ಘಟನೆಯು ಲಂಡನ್‌ ಬೆರ‍್ರಿಯ ಓಲ್ಡ್‌ ಡಾಕ್ಸ್‌ ಬಾರ್‌ನಲ್ಲಿ ಜರುಗಿದೆ.

ರೆಸ್ಟಾರಂಟ್ ಮಾಲೀಕನೂ ಆದ ಹಾರ್ಕಿನ್ ಸ್ವೇಹಿತ ಲಿಯಾಮ್ ಶೀಲ್ಸ್‌ ಈ ಚೇಷ್ಟೆಯ ರುವಾರಿಯಾಗಿದ್ದು, ಅದಕ್ಕೂ ಮುನ್ನ ಜೋಡಿಯನ್ನು ಕೇಂದ್ರ ಭಾಗದಲ್ಲಿದ್ದ ಮೇಜೊಂದರ ಮೇಲೆ ಕೂರುವಂತೆ ಮಾಡಿದ್ದಾರೆ. ಈ ಮೂಲಕ ಅಲ್ಲಿದ್ದವರಿಗೆಲ್ಲಾ ಈ ಜೋಡಿ ಚೆನ್ನಾಗಿ ಎದ್ದು ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...