alex Certify ಸಂಕಷ್ಟದಲ್ಲಿದ್ದ ಪ್ರಾಣಿ ರಕ್ಷಿಸಿದ ಕೊರೊನಾ ವಾರಿಯರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಕಷ್ಟದಲ್ಲಿದ್ದ ಪ್ರಾಣಿ ರಕ್ಷಿಸಿದ ಕೊರೊನಾ ವಾರಿಯರ್ಸ್

Paramedics in PPE Suit Rescue Skunk whose Head was Stuck in a ...

ಕೆನಡಾದ ರಸ್ತೆಯಲ್ಲಿ ರಾತ್ರಿ ವೇಳೆ ಹಾದು ಹೋಗುತ್ತಿದ್ದ ಕೊರೊನಾ ಯೋಧರಿಬ್ಬರ ಕಣ್ಣಿಗೆ ಅಚಾನಕ್ಕಾಗಿ ಪ್ರಾಣಿಯೊಂದು ಚಲಿಸುತ್ತಿರುವುದು ಕಂಡಿದೆ.

ವಾಹನ ಇಳಿದು ನೋಡಿದರೆ, ಅದರ ಮೂತಿ ಬೆಳ್ಳಗಿದೆ. ಹಿಂಭಾಗ ಕಪ್ಪಗಿದೆ. ಅದ್ಯಾವ ಪ್ರಾಣಿ ಎಂದು ಬೆಳಕು ಬಿಟ್ಟು ನೋಡಿದರೆ, ಬಿಳಿ ಮೂತಿಯಲ್ಲಿ ಕಣ್ಣು, ಬಾಯಿ ಯಾವುದೂ ಕಾಣುತ್ತಿಲ್ಲ.

ಸಮೀಪ ಹೋಗಿ ನೋಡಿದರೆ, ಯಾವುದೋ ಪ್ರಾಣಿಯ ಮೂತಿ ಪೇಪರ್ ಕಪ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಹೆದರುತ್ತಲೇ ಹತ್ತಿರಕ್ಕೆ ಹೋದ ಪಿಪಿಇ ವಸ್ತ್ರದಲ್ಲಿದ್ದ ಅರೆವೈದ್ಯಕೀಯ ಸಿಬ್ಬಂದಿ ಕ್ಯಾಟಲಿನ್ ಮತ್ತು ಮೇರಿ, ಪ್ರಾಣಿಯ ತಲೆ ಸಿಲುಕಿದ್ದ ಕಪ್ ಬಿಡಿಸಿದ್ದಾರೆ.

ಚಂಗನೇ ಹಾರಿದ ಸ್ಕಂಕ್ (ಅಳಿಲು ಹಾಗೂ ತರಕರಡಿ ರೂಪದ ಪ್ರಾಣಿ) ರಸ್ತೆ ಬದಿ ಇಳಿದು ಹೊರಟೇ ಬಿಟ್ಟಿತು. ಕೊನೆಗೆ ಬಡಜೀವಿಯೊಂದನ್ನೂ ಉಳಿಸಿದ ಖುಷಿಯಲ್ಲಿ ಕ್ಯಾಟಲಿನ್ ಹಾಗೂ ಮೇರಿ ಕೂಡ ಹೊರಟರು. ಈ ವಿಡಿಯೋ ವೈರಲ್ ಆಗಿದೆ.

Katelyn & Mary were driving in Innisfil when Mary saw an animal that looked like it was hurt. She turned them around and they found the skunk with its head stuck in a Tim Hortons cup. They got all their PPE on and he walked right over to them repeatedly until…. #extracationsuccessful #pleasedontlitter #tistheseason #skunksofinstagram #skunknotskunked

Posted by Simcoe County Paramedics of OPSEU Local 303 on Wednesday, July 29, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...