alex Certify ಬೆರಗಾಗಿಸುತ್ತೆ ಪ್ಯಾರಾಗ್ಲೈಡಿಂಗ್‌ ಮಾಡ್ತಾ ಈತ ಮಾಡಿರುವ ಕಾರ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಪ್ಯಾರಾಗ್ಲೈಡಿಂಗ್‌ ಮಾಡ್ತಾ ಈತ ಮಾಡಿರುವ ಕಾರ್ಯ…!

ಈ ಪ್ಯಾರಾಗ್ಲೈಡಿಂಗ್ ವಿಡಿಯೋಗಳು ಯಾವಾಗಲೂ ನೋಡಲು ಬಲೇ ಮಜವಾಗಿರುತ್ತವೆ. ಈ ಸಾಹಸದಲ್ಲಿರುವ ಮಂದಿಯ ಮೊಗದಲ್ಲಿ ಕಾಣುವ ಮುಖಭಾವಗಳನ್ನು ನೋಡುವುದೇ ಒಂದು ಖುಷಿ.

ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಸೋಫಾ ಸೆಟ್‌ ಮೇಲೆ ಕುಳಿತುಕೊಂಡು, ಎದುರಿಗೆ ಟಿವಿ ಇಟ್ಟುಕೊಂಡು ನೋಡುವುದನ್ನು ಊಹೆ ಮಾಡಿಕೊಂಡಿದ್ದೀರಾ…?

ಟರ್ಕಿಯ ಪ್ಯಾರಾಗ್ಲೈಡರ್‌ ಹಸನ್ ಕವಲ್ ಇದೇ ರೀತಿ ಮಾಡಿಕೊಂಡು, ವಿಶೇಷವಾಗಿ ವಿನ್ಯಾಸ ಮಾಡಲಾದ ಸೋಫಾ ಹಾಗೂ ಟಿವಿ ಸೆಟ್ ‌ಅನ್ನು ಇಟ್ಟುಕೊಂಡು ಆಗಸದಲ್ಲಿ ಪ್ಯಾರಾಚೂಟ್ ಕಟ್ಟಿಕೊಂಡು ತೇಲಾಡಿ, ಈ ಟೈಮಲ್ಲೇ ಟಾಮ್ & ಜೆರ‍್ರಿ ಶೋ ನೋಡಿಕೊಂಡು ಬಂದಿದ್ದಾರೆ. ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀವ್ಸ್‌ಗಳನ್ನು ಗಿಟ್ಟಿಸಿಕೊಂಡು ಸಖತ್‌ ಹಿಟ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...