alex Certify ಪಿರಮಿಡ್‌ ಕುರಿತು ಯಡವಟ್ಟು ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ ಎಲಾನ್ ಮಸ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿರಮಿಡ್‌ ಕುರಿತು ಯಡವಟ್ಟು ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ ಎಲಾನ್ ಮಸ್ಕ್

ಸ್ಪೇಸ್ ಎಕ್ಸ್‌ ನಿರ್ಮಾತೃ ಹಾಗೂ ಟೆಸ್ಲಾದ ಸಿಇಓ ಎಲಾನ್ ಮಸ್ಕ್‌ ಯಾವಾಗಲೂ ಚಕಿತಗೊಳಿಸುವ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸಹ ಹಾಗೇ ಆಗಿದ್ದು, ಈಜಿಪ್ಟ್‌ನಲ್ಲಿರುವ ಗಿಝಾ ಪಿರಮಿಡ್‌ಗಳ ಬಗ್ಗೆ ಒಂದು ಎಡವಟ್ಟಿನ ಹೇಳಿಕೆ ಕೊಟ್ಟಿದ್ದಾರೆ.

ಜಗತ್ತಿನ ಅದ್ಭುತಗಳಲ್ಲಿ ಒಂದಾದ ಗಿಝಾ ಪಿರಮಿಡ್‌ಗಳನ್ನು ಈಜಿಪ್ಟ್‌ನ ಫರೋಹಾಗಳು ಕಟ್ಟಿಸಿದ್ದರು. ಆದರೆ ಮಸ್ಕ್‌ ಈ ಹೇಳಿಕೆ ನೀಡುವ ಮುನ್ನ ಪಿರಮಿಡ್‌ಗಳ ಇತಿಹಾಸದ ಬಗ್ಗೆ ಹೋಂ ವರ್ಕ್ ಮಾಡಿಲ್ಲವೆಂದು ತೋರುತ್ತದೆ.

ಅನ್ಯಗ್ರಹ ಜೀವಿಗಳು ಪಿರಮಿಡ್‌ ನಿರ್ಮಿಸಿವೆ ಎಂದು ಹೇಳಿರುವ ಮಸ್ಕ್‌, “Aliens built the pyramids obv,” ಎಂದು ಟ್ವೀಟ್ ಮಾಡಿದ್ದಾರೆ. ಭಯಂಕರ ಫಾಲೋವರ್ಸ್‌ಗಳನ್ನು ಹೊಂದಿರುವ ಮಸ್ಕ್‌ರ ಈ ಟ್ವೀಟ್‌ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿಬಿಟ್ಟಿದೆ. ಮಸ್ಕ್‌ ಬಹುಶಃ ಇತಿಹಾಸದ ಪುಸ್ತಕಗಳನ್ನು ಇನ್ನೊಮ್ಮೆ ತೆಗೆದು ನೋಡಬೇಕಿದೆ ಎಂದು ಅವರ ಫಾಲೋವರ್ಸ್ ಅವರಿಗೆ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...