alex Certify ಭರ್ಜರಿ ಚರ್ಚೆಗೆ ಗ್ರಾಸವಾಯ್ತು ಟ್ರಂಪ್‌ ರ ಈ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಚರ್ಚೆಗೆ ಗ್ರಾಸವಾಯ್ತು ಟ್ರಂಪ್‌ ರ ಈ ಚಿತ್ರ

ಅಮೆರಿಕ ಅಧ್ಯಕ್ಷರು ಅಂದ ಮೇಲೆ ಹಾಗೇ ನೋಡಿ. ಅವರು ಏನೇ ಮಾಡಿದರೂ ಅದು ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಅವರ ಒಂದು ಸಣ್ಣ ಸೀನು & ಕೆಮ್ಮುಗಳೂ ಸಹ ಇಂಟರ್ನೆಟ್‌ನಲ್ಲಿ ಚರ್ಚೆಯ ವಿಷಯವಾಗಿ, ರಾಜಕೀಯದ ಎಡ/ಬಲದ ನಿಲುವುಗಳಿಂದ ಲೇಪಿತವಾದ ವರ್ಣರಂಜಿತ ಬರಹಗಳಿಗೆ ಆಹಾರವಾಗಿಬಿಡುತ್ತದೆ.

ಶನಿವಾರ ಅಮೆರಿಕದಲ್ಲಿ ಸ್ವತಂತ್ರ ದಿನಾಚರಣೆಯ ಸಂಭ್ರಮ. ಈ ಸಂದರ್ಭದಲ್ಲಿ, ಅಲ್ಲಿನ ಮೌಂಟ್ ರಶ್‌ಮೋರ್‌ ಗುಡ್ಡದ ಮೇಲೆ ಇರುವ ಅಮೆರಿಕ ನಾಲ್ವರು ಮಾಜಿ ಅಧ್ಯಕ್ಷರುಗಳ ಕೆತ್ತನೆಯೊಂದಿಗೆ ಖುದ್ದು ತಮ್ಮ ಚಿತ್ರವೊಂದನ್ನು ಟ್ರಂಪ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ವಾದ-ವಿವಾದ, ಚರ್ಚೆಗಳು ನಡೆಯಲು ಇನ್ನೇನು ಬೇಕು? ಅಧ್ಯಕ್ಷರ ಈ ಚಿತ್ರ ವೈರಲ್ ಆಗಿ, ನಿರೀಕ್ಷೆಯಂತೆಯೇ ಅವರ ಪರ/ವಿರೋಧದ ಮಾತುಗಳು ಟ್ವಿಟರ್‌ನಲ್ಲಿ ಭಾರೀ ಜೋರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...