alex Certify ಮಕ್ಕಳಿಗೆ ದುಡಿಮೆಯ ಪಾಠ ಹೇಳಿಕೊಡಲು ಮಹಿಳೆ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ದುಡಿಮೆಯ ಪಾಠ ಹೇಳಿಕೊಡಲು ಮಹಿಳೆ ಮಾಡಿದ್ದೇನು ಗೊತ್ತಾ…?

ಲಂಡನ್: ಕೊರೋನಾ ವೈರಸ್ ಲಾಕ್‌ಡೌನ್ ನಿಂದ ಹೋಟೆಲ್, ಅಂಗಡಿ, ಬೇಕರಿಗಳು ಬಂದಾಗಿವೆ. ಈ ಸಂದರ್ಭದಲ್ಲಿ ಲಂಡನ್ ನ ಮಹಿಳೆಯೊಬ್ಬರು 100 ಪೌಂಡ್ ನೀಡಿ ವೆಂಡಿಂಗ್ ಮಷಿನ್( ಹಣ ಹಾಕಿದರೆ ವಸ್ತು ನೀಡುವ ಯಂತ್ರ) ಅನ್ನು ಖರೀದಿಸಿದ್ದಾರೆ.

ಸರಾ ಬ್ಲಾಸ್ಡನ್‌ ಎಂಬ ಮಹಿಳೆ ತನ್ನ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿಗಾಗಿ ಇದನ್ನು ಖರೀದಿಸಿದ್ದು, ಮಷಿನ್ ತುಂಬಾ ಚಿಪ್ಸ್, ಚಾಕಲೇಟ್, ಸ್ನ್ಯಾಕ್ಸ್ ತುಂಬಿಟ್ಟಿದ್ದಾರೆ. ಅದರ ಫೋಟೋವನ್ನು ಇತ್ತೀಚೆಗೆ ಇನ್ಸ್ಟಾಗ್ರಾಂ‌ ನಲ್ಲಿ‌ ಅಪ್ಲೋಡ್ ಮಾಡಿದ್ದಾರೆ.

ಮನೆಯ ಮಕ್ಕಳಿಗೇ ತಿಂಡಿ‌ ನೀಡುವುದಾದಲ್ಲಿ ವೆಂಡಿಂಗ್‌ ಮಷಿನ್ ಏಕೆ‌..? ನೇರವಾಗಿ ನೀಡಬಹುದಲ್ಲ ಎಂದು ನೀವು ಆಲೋಚಿಸುತ್ತಿರಬಹುದು.‌ ಆದರೆ, ಮಹಿಳೆಯ ಆಲೋಚನೆಯೇ‌ ಬೇರೆ. ಆಕೆ‌ ಮಕ್ಕಳಿಗೆ ಉಚಿತವಾಗಿ ಆಹಾರ ನೀಡುತ್ತಿಲ್ಲ. ಮನೆ ಕೆಲಸ, ಶಾಲೆಯ ಮನೆಪಾಠ ಶೀಘ್ರ ಮುಗಿಸಿದ ಮಕ್ಕಳು ಹಣ ಪಡೆದು ಮಷಿನ್ ನಿಂದ ತಿಂಡಿ‌ ಪಡೆಯಬಹುದು. “ಇದು ಮಕ್ಕಳಿಗೆ ದುಡಿಮೆಯ ಪಾಠ, ಹಣದ‌ ಮಹತ್ವ ತಿಳಿಸಿಕೊಟ್ಟಿದೆ” ಎಂದು‌ ಮಹಿಳೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...