alex Certify ಬಾಲಕಿ ರಕ್ಷಿಸಲು ಆರು ಅಂತಸ್ತಿನ ಕಟ್ಟಡ ಏರಿದ ಸ್ಪೈಡರ್ ಮ್ಯಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿ ರಕ್ಷಿಸಲು ಆರು ಅಂತಸ್ತಿನ ಕಟ್ಟಡ ಏರಿದ ಸ್ಪೈಡರ್ ಮ್ಯಾನ್

ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದ ಪುಟ್ಟ ಹುಡುಗಿಯನ್ನು ರಕ್ಷಿಸಲು ಯುವಕನೊಬ್ಬ ಆರು ಅಂತಸ್ತಿನ ಕಟ್ಟಡವನ್ನು ಏರಿ ಸಾಹಸ ಮೆರೆದಿದ್ದಾನೆ.

ಮೇ 21ರಂದು ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ತನ್ನ ಮನೆಯ ಬಾಲ್ಕನಿಯ ಹೊರಭಾಗ ಸಿಲುಕಿಕೊಂಡಿದ್ದ ಬಾಲಕಿ ಅಪಾಯದ ಸ್ಥಿತಿಯಲ್ಲಿದ್ದಳು. ರಸ್ತೆಯಲ್ಲಿ ನಿಂತ ಜನ ಆಕೆ ಒಂದು ವೇಳೆ ಬಿದ್ದರೆ ರಕ್ಷಿಸಲು ಬೆಡ್ ಶೀಟ್ ಹಿಡಿದು ಸಿದ್ಧವಾಗಿದ್ದರು.

ಈ ವೇಳೆ ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವ್ಯಕ್ತಿ ಸಮಯ ವ್ಯರ್ಥ ಮಾಡದೇ ಕಟ್ಟಡದ ಹೊರಭಾಗದಿಂದ ಸ್ಪೈಡರ್ ಮ್ಯಾನ್ ರೀತಿ ಆರನೇ ಮಹಡಿ ತಲುಪಿ, ಬಾಲಕಿಯನ್ನು ರಕ್ಷಿಸಿದರು.

ಯುವಕನ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿದ್ದು ನೂರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ರಿಯಲ್ ಲೈಫ್ ಸ್ಪೈಡರ್ ಮ್ಯಾನ್ ಎಂದು ಕರೆದಿದ್ದಾರೆ. ಜೊತೆಗೆ ಆತ ಕೆಲಸ ಮಾಡುವ ಕಂಪೆನಿ ಅವನಿಗೆ 600000 ಯುವಾನ್ ಬಹುಮಾನವನ್ನು ಪ್ರಕಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...