alex Certify
ಕನ್ನಡ ದುನಿಯಾ       Mobile App
       

Kannada Duniya

ಕರೋನಾ ಭೀತಿ ಸಂದರ್ಭದಲ್ಲೇ ಈ ಕೆಲಸ ಮಾಡಿದವನು ಜೈಲು ಪಾಲು

ಮಿಸ್ಸೌರಿ, ಅಮೆರಿಕ: ಕರೋನಾ ವೈರಸ್ ಜೀವ ತೆಗೆಯುವುದರ ಜೊತೆಗೆ ಭಯವನ್ನು ಹುಟ್ಟು ಹಾಕಿದೆ. ಎಲ್ಲಿ ರೋಗ ಬಂದರೆ ಏನಾಗುವುದೋ ಎಂಬ ಭಯದಲ್ಲಿ ಜನ ಬದುಕುವಂತಾಗಿದೆ. ಇಲ್ಲೊಬ್ಬ ಜೋಕ್ ಮಾಡಲು ಹೋಗಿ ಈಗ ತಾನೇ ಜೋಕರ್ ಆಗಿ ಜೈಲು ಸೇರಿದ್ದಾನೆ.

ಮಿಸ್ಸೌರಿಯ 26 ವರ್ಷದ ಕೋಡಿ ಪಿಫ್ಸ್ಟರ್, ಸೂಪರ್ ಮಾರ್ಕೆಟ್ ಗೆ ಹೋಗಿದ್ದಾರೆ. ಅಲ್ಲಿ ಇರುವ ಸೆಲ್ ಗಳಲ್ಲಿ ಆಹಾರ ಪದಾರ್ಥಗಳನ್ನು ನೆಕ್ಕಿದ್ದಾನೆ.

ಬಳಿಕ ಅದನ್ನು ವಿಡಿಯೋ ಮಾಡಿಕೊಂಡು, ಸ್ನ್ಯಾಪ್ ಚಾಟ್ ಮೂಲಕ ಹಂಚಿಕೊಂಡಿದ್ದಾರೆ. ಇದು ಭರ್ಜರಿ ವೈರಲ್ ಆಗಿದ್ದು’ ಜನ ಭಯಭೀತರಾಗಿದ್ದರು. ಮಾ. 11ರಂದು ಪ್ರಕರಣ ನಡೆದಿತ್ತು.

ಈ ವಿಡಿಯೊ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಒಳಪಟ್ಟಿದ್ದಲ್ಲದೆ ನೆದರ್ಲೆಂಡ್, ಐರ್ಲೆಂಡ್ ಹಾಗೂ ಯುನೈಟೆಡ್ ಕಿಂಗ್ಡಮ್ ಗಳಲ್ಲೂ ಭಯವನ್ನು ಹುಟ್ಟುಹಾಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಸ್ಥಳೀಯ ಜನರು ಭಯಭೀತಗೊಂಡ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈತನ ಮೇಲೆ ಉಗ್ರರಿಗೆ ದಾಖಲಿಸುವ ಸೆಕ್ಷನ್ ಗಳಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಈಗ ಏನೋ ಮಾಡಲು ಹೋಗಿ ಈತ ಜೈಲು ಸೇರಿದಂತಾಗಿದೆ.

A local resident who took a video of themselves licking the merchandise after making a "Corona Virus" statement at…

Posted by City of Warrenton Police Department on Monday, March 23, 2020

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...