alex Certify ಗ್ರೇಟ್ ಎಸ್ಕೇಪ್…! ಆಮೆ ಎಂದುಕೊಂಡು ಗ್ರೆನೇಡ್‌ ಎತ್ತಿಕೊಳ್ಳಲು ಹೊರಟಿತ್ತು ಮಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರೇಟ್ ಎಸ್ಕೇಪ್…! ಆಮೆ ಎಂದುಕೊಂಡು ಗ್ರೆನೇಡ್‌ ಎತ್ತಿಕೊಳ್ಳಲು ಹೊರಟಿತ್ತು ಮಗು

ಆಮೆಯ ಮೇಲ್ಮೈ ಚಿಪ್ಪು ಹಾಗೂ ಗ್ರೆನೇಡ್ ಒಂದೇ ರೀತಿ ಇರುತ್ತದೆ. ಹೀಗೆ ತನ್ನ ಕಣ್ಣ ಮುಂದೆ ಕಾಣಿಸಿದ್ದು ಆಮೆ ಎಂದೆಣಿಸಿ ಐದು ವರ್ಷದ ಮಗುವೊಂದು ಅದನ್ನೆತ್ತಿಕೊಳ್ಳಲು ಹೋದ ಘಟನೆ ನಡೆದಿದೆ.

ಅದೃಷ್ಟವಶಾತ್ ಆ ಮಗುವಿನ ತಂದೆ ಮಾಜಿ ಸರ್ಕಸ್ ಪ್ರದರ್ಶಕ ಲೂಯಿ ಲೋಮಸ್ ಅವರು ಅನುಮಾನ ಬಂದು ಅದನ್ನು ತೆಗೆದುಕೊಳ್ಳದಂತೆ ನೋಡಿಕೊಂಡಿದ್ದಾರೆ.

ಬಳಿಕ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿ ಸಹಾಯಕ್ಕೆ ಮೊರೆ ಇಟ್ಟರು. ಪೊಲೀಸರು ಅದನ್ನು ಪರಿಶೀಲಿಸಿದಾಗ ಅದು ಆಮೆಯಲ್ಲ, ಗ್ರೇನೆಡ್ ಎಂದು ಅರಿವಿಗೆ ಬಂದಿದೆ. ಬಾಂಬ್ ಸ್ಕ್ವಾಡ್ ಸಹ ಸ್ಥಳಕ್ಕಾಗಮಿಸಿ ಅದನ್ನು ಸುರಕ್ಷಿತ ಸ್ಥಳದಲ್ಲಿ ಸ್ಪೋಟಿಸಲಾಯಿತು. ಈ ಮೂಲಕ ಸಂಭಾವ್ಯ ಅಪಾಯದಿಂದ ತನ್ನ ಮಗನನ್ನು ನೋಮಸ್ ರಕ್ಷಿಸಿದ್ದಾರೆ. ಅಲ್ಲಿ ಸಿಕ್ಕ ಗ್ರೆನೇಡ್ ಮೊದಲನೇ ಮಹಾಯುದ್ಧದಲ್ಲಿ ಬಳಕೆಯಾಗಿದ್ದು ಎಂದು ಅಭಿಪ್ರಾಯಪಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...