alex Certify ಮಾಲೀಕ ಸಾವನ್ನಪ್ಪಿರುವುದರ ಅರಿವಿಲ್ಲದೆ 3 ತಿಂಗಳಿಂದ ಆತನ ನಿರೀಕ್ಷೆಯಲ್ಲಿದೆ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕ ಸಾವನ್ನಪ್ಪಿರುವುದರ ಅರಿವಿಲ್ಲದೆ 3 ತಿಂಗಳಿಂದ ಆತನ ನಿರೀಕ್ಷೆಯಲ್ಲಿದೆ ಶ್ವಾನ

ನಾಯಿ, ನಿಷ್ಠೆಗೆ ಹೆಸರುವಾಸಿ. ತನಗೆ ಅನ್ನ ಹಾಕಿದ ಮಾಲೀಕನನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ.

ಚೀನಾದ ಹುಬೈ ಪ್ರಾಂತದ ಆಸ್ಪತ್ರೆ ಮುಂಭಾಗ ಮೂರು ತಿಂಗಳಿನಿಂದ ಕ್ಸಿಯಾವೋ ಬಾವೋ ಹೆಸರಿನ ನಾಯಿ ತನ್ನ ಮಾಲೀಕನ ಬರುವಿಕೆಗಾಗಿ ಕಾಯುತ್ತಲೇ ಇತ್ತು.

ನಾಯಿಯ ಮಾಲೀಕ ಕೊರೋನಾ ವೈರಸ್ ಹಿನ್ನೆಲೆ ಆಸ್ಪತ್ರೆಗೆ ಸೇರಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವಿಷಯ ಅರಿವಿಗೆ ಬಾರದೇ ನಾಯಿ ಮಾಲೀಕನನ್ನು ಎದುರುಗೊಳ್ಳಲು ತಾಳ್ಮೆಯಿಂದ ಕಾಯುತ್ತಲೇ ಇತ್ತು. ಆಸ್ಪತ್ರೆ ಆವರಣ ಬಿಟ್ಟು ಕದಲಿರಲಿಲ್ಲ.

ಇದೀಗ ಪ್ರಾಣಿ ರಕ್ಷಣಾ ಸಂಘವು ನಾಯಿಯನ್ನು ಆಶ್ರಯ ತಾಣಕ್ಕೆ ಸ್ಥಳಾಂತರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...