alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯರ ಕಾರ್ಯಕ್ಕೆ ಮನದುಂಬಿ ಗೌರವ ಸಲ್ಲಿಸಿದ ಜನ

ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಅವಿರತ ಶ್ರಮವನ್ನು ಇಡೀ ಮನುಕುಲವೇ ಮೆಚ್ಚಿಕೊಂಡಿದ್ದು, ಖುದ್ದು ತಮಗೇ ಈ ವೈರಾಣುಗಳು ಅಂಟಿಕೊಳ್ಳುವ ಭಯವನ್ನೂ ಲೆಕ್ಕಿಸದೇ ತಂತಮ್ಮ ಕರ್ತವ್ಯಗಳಲ್ಲಿ ಮುಳುಗಿರುವ ಇವರೀಗ ಎಲ್ಲೆಲ್ಲೂ ಹೀರೋಗಳಾಗಿದ್ದಾರೆ.

ಕಳೆದ ವಾರ, ಕೊರೋನಾ ಪೀಡಿತ ವುಹಾನ್‌ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಶ್ರಮಿಸಿದ ಎಲ್ಲ ವೈದ್ಯರ ಚಿತ್ರಗಳನ್ನು ಚೀನಾದ ಎಲ್ಲ ನಗರಗಳೂ ಸಹ ತಂತಮ್ಮ ಕಟ್ಟಡಗಳ ಮೇಲೆ, ಬಸ್ಸುಗಳು/ಮೆಟ್ರೋ ರೈಲುಗಳ ಎಲ್‌ಇಡಿ ಪರದೆಗಳ ಮೇಲೆ ಬಿತ್ತರಿಸುವ ಮೂಲಕ ಗೌರವಿಸಿದ್ದವು.

ಇದೀಗ ಉತ್ತರ ಐರ್ಲೆಂಡ್‌ನಲ್ಲೂ ಸಹ ಇಂಥದ್ದೇ ಒಂದು ಘಟನೆಯಲ್ಲಿ, ಸ್ಟೋರ್‌ ಒಂದಕ್ಕೆ ಬಂದ ವೈದ್ಯರನ್ನು ಅಲ್ಲಿನ ಜನರು ಅವರಿಗೆ ಹೂಗುಚ್ಛಗಳನ್ನು ನೀಡುವ/ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದ್ದಾರೆ. ಇಲ್ಲಿನ ಬೆಲ್ಫಾಸ್ಟ್‌ನ ಟೆಸ್ಕೋ ಸೂಪರ್‌ ಮಾರ್ಕೆಟ್‌ನಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.

Showing our appreciation for our amazing NHS staff♥️♥️♥️**a lot of people are commenting the same things… just to clarify, NHS ID cards were checked at the door and the store opened early for both NHS and Tesco employees**

Posted by Michaela Osborne on Sunday, March 22, 2020

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...