alex Certify ವೃದ್ಧೆಯನ್ನು ಬೆನ್ನ ಮೇಲೆ ಹೊತ್ತೊಯ್ದು ಮಾನವೀಯತೆ ಮೆರೆದ ಉಪವಾಸ ನಿರತ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧೆಯನ್ನು ಬೆನ್ನ ಮೇಲೆ ಹೊತ್ತೊಯ್ದು ಮಾನವೀಯತೆ ಮೆರೆದ ಉಪವಾಸ ನಿರತ ಅಧಿಕಾರಿ

ಕೊರೋನಾ ವಿಶ್ವಾದ್ಯಂತ ವಿಷಮ‌ ವಾತಾವರಣ ಸೃಷ್ಟಿಸಿದೆ. ಈ ಮಧ್ಯೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಕಾಳಜಿ ಬಗ್ಗೆ ವಿಶೇಷ ಸಂಗತಿಗಳು ಬಹಿರಂಗವಾಗುತ್ತಿವೆ.

ಮಲೇಶಿಯಾದ‌ ಹೆಲ್ತ್ ಇನ್ಸ್‌ಪೆಕ್ಟರ್ ರಂಜಾನ್ ಉಪವಾಸದ ನಡುವೆಯೂ ವೃದ್ಧ ಮಹಿಳೆಯನ್ನು ಬೆನ್ನಿನ ಮೇಲೆ ಏರಿಸಿಕೊಂಡು ಕೋವಿಡ್ 19 ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ರಕ್ಷಣಾ ಕಿಟ್ ಧರಿಸಿದ್ದ ಹೆಲ್ತ್ ಇನ್ ಸ್ಪೆಕ್ಟರ್ ವೃದ್ಧೆಯನ್ನು ಕರೆದೊಯ್ಯಲು ಸಿದ್ಧತೆ ನಡೆಸಿರುವ ಫೋಟೋ ವೈರಲ್ ಆಗಿದೆ.

ಫೋಟೋವನ್ನು ಮಲೇಷ್ಯಾ ಆರೋಗ್ಯ ಇಲಾಖೆ ಮಹಾನಿರ್ದೇಶಕ ಡಾ.ನೂರ್ ಹಿಶಮ್ ಅಬ್ದುಲ್ಲಾ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಆರೋಗ್ಯ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ರಂಜಾನ್ ಉಪವಾಸವಿರುವ ಆರೋಗ್ಯ ಅಧಿಕಾರಿಯ ಈ ಶ್ರಮ ಹಲವರಿಗೆ ಹೃದಯಸ್ಪರ್ಶಿಯಾಗಿ ಕಾಣಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...