alex Certify ಲೈವ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾದ ಆಸ್ಟ್ರಿಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾದ ಆಸ್ಟ್ರಿಚ್

ಸುದ್ದಿವಾಹಿನಿಗಳ ನೇರ ಪ್ರಸಾರ ವೇಳೆ ಆಸ್ಟ್ರಿಚ್ ಪಕ್ಷಿಯೊಂದು ತನಗೂ ಏನೋ ಹೇಳುವುದಿದೆ ಎಂಬಂತೆ ಕ್ಯಾಮರಾ ಮುಂದೆ ಮುಖ ಹಾಕಿದ್ದು ಈಗ ವಿಶ್ವದಾದ್ಯಂತ ವೈರಲ್ ಆಗಿದೆ.

ಉತ್ತರ ಸ್ಪೇನ್‌ ನ ಕ್ಯಾಂಟಬ್ರಿಯಾದ ಅಧ್ಯಕ್ಷ ಮಿಗುಯೆಲ್ ಏಂಜೆಲ್ ರವಿಲ್ಲ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಏಕಾಏಕಿ ಪಕ್ಕದಲ್ಲಿ ಆಗಮಿಸಿದ ಆಸ್ಟ್ರಿಚ್ ಪಕ್ಷಿಯು ತಾನೂ ಪ್ರತಿಕ್ರಿಯೆ ನೀಡುವಂತೆ ಮುಖ ಹಾಕಿತು.

ಲಾಕ್ ಡೌನ್ ಸಡಿಲಿಕೆ ಬಳಿಕ ಕ್ಯಾಬಾರ್ಸೆನೊ ನ್ಯಾಚುರಲ್ ಪಾರ್ಕ್ ಮೃಗಾಲಯವನ್ನು ಸಾರ್ವಜನರಿಕರ ಪ್ರವೇಶಕ್ಕೆ ಮುಕ್ತಗೊಳಿಸುವ ಸಂಬಂಧ ಅವರು ಹೇಳಿಕೆ ನೀಡುತ್ತಿದ್ದಾಗ ಆಸ್ಟ್ರಿಚ್ ಮಧ್ಯ ಪ್ರವೇಶಿಸಿ ಗಮನ ಸೆಳೆದಿದೆ.

ಮಿಗುಯೆಲ್ ಏಂಜೆಲ್ ರವಿಲ್ಲ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾಗ ಆಸ್ಟ್ರಿಚ್ ಬಂದಿದ್ದು ಅವರಿಗೂ ತಿಳಿದಿರಲಿಲ್ಲ, ಅವರ ಪಕ್ಕದಲ್ಲಿಯೇ ಕುತ್ತಿಗೆ ಬಳಿ ಬಂದು ಅದು ಕಾಣಿಸಿಕೊಂಡ ಮಾಧ್ಯಮಗಳ ಕ್ಯಾಮರಾ ದೃಷ್ಟಿಯೂ ಅತ್ತ ಹರಿಯಿತು. ಹೀಗಾಗಿ ಈ ಲೈವ್ ಸುದ್ದಿಗೋಷ್ಠಿ ಜಗತ್ತಿನಾದ್ಯಂತ ವಿಶೇಷ ಕಾರಣಕ್ಕೆ ವೈರಲ್ ಆಗಿದೆ.

Ya lo predijeron Los Simpson ? https://as.com/epik/2020/05/24/videos/1590302064_204874.html

Posted by Miguel Ángel Revilla on Sunday, May 24, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...