alex Certify ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಹಸಿರು ಮಂಜಿನ ಹೊದಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಹಸಿರು ಮಂಜಿನ ಹೊದಿಕೆ

ಸಾಮಾನ್ಯವಾಗಿ ಮಂಜು ಬಿಳಿಯ ಬಣ್ಣದಲ್ಲಿರುತ್ತದೆ, ಆದರೆ ಇಲ್ಲೊಂದು ಬೆಳವಣಿಗೆಯಲ್ಲಿ ಹಸಿರು ಬಣ್ಣದ ಮಂಜಿನ ಹೊದಿಕೆ ಚರ್ಚೆಗೆ ಕಾರಣವಾಗಿದೆ.

ಅಂಟಾರ್ಟಿಕಾದಲ್ಲಿ ಮಂಜು ಹಸಿರು ಬಣ್ಣದಲ್ಲಿ ಇರುವಂತೆ ಕಂಡುಬಂದಿದ್ದು ಇದರ ಫೋಟೋ ವೈರಲ್ ಆಗಿದೆ, ನೆಟ್ಟಿಗರು ಈ ಹಸಿರು ಮಂಜಿನ ಹೊದಿಕೆ ತಮ್ಮದೇ ರೀತಿಯಲ್ಲಿ ವರ್ಣಿಸುತ್ತಿದ್ದಾರೆ.

ತಾಪಮಾನದ ಬದಲಾವಣೆಗಳು,‌ ಮಂಜು ಕರಗುವುದು ಇತ್ಯಾದಿ ವಿದ್ಯಮಾನದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಆತಂಕ ವ್ಯಕ್ತವಾಗಿದೆ. ಇದೀಗ ಹಸಿರು ಬಣ್ಣದ ಮಂಜು ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಅಂಟಾರ್ಟಿಕ್ ಸೊಸೈಟಿಯ ವಿಜ್ಞಾನಿಗಳು ಮತ್ತು ಜೀವಶಾಸ್ತ್ರಜ್ಞರು ಹಿಮದ ಹೊದಿಕೆ ಮೇಲೆ ಅಧ್ಯಯನ ನಡೆಸಿದ್ದು, ಹಿಮದ ಹೊದಿಕೆ ಮೇಲೆ ಆಲ್ಗಾ ಬ್ಲೂಮ್ ಕಾಣಿಸಿಕೊಂಡಿದ್ದು, ಹೀಗಾಗಿ ಈ ಪ್ರದೇಶದಲ್ಲಿ ಹಸಿರು ಉಂಟಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಈ ಹಸಿರು ಹೊದಿಕೆ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುವ ಜೊತೆಗೆ ಆತಂಕವನ್ನು ಹೊರಹಾಕಿದ್ದಾರೆ. ಒಂದಷ್ಟು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...