alex Certify ಕೊಳದಲ್ಲಿ ಸಿಲುಕಿದ ನಾಯಿಯ ರಕ್ಷಣೆಗೆ ಧಾವಿಸಿದ ಫೈರ್‌ಫೈಟರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳದಲ್ಲಿ ಸಿಲುಕಿದ ನಾಯಿಯ ರಕ್ಷಣೆಗೆ ಧಾವಿಸಿದ ಫೈರ್‌ಫೈಟರ್‌

ತಣ್ಣಗೆ ಕೊರೆಯುವ ನೀರಿನ ಕೊಳವೊಂದರಲ್ಲಿ ಸಿಲುಕಿಕೊಂಡ ನಾಯಿಯೊಂದನ್ನು ರಕ್ಷಿಸಲು ಮುಂದಾದ ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಮಾನವೀಯತೆಗೆ ನೆಟ್ಟಿಗ ಸಮುದಾಯ ಚಪ್ಪಾಳೆ ತಟ್ಟಿದೆ.

ಅಮೆರಿಕದ ಕೊಲರಾಡೋದ ಸ್ಟರ್ನ್ ಪಾರ್ಕ್‌‌ನಲ್ಲಿ ನಡೆದ ಈ ಘಟನೆಯ ವಿಡಿಯೋ ಫುಟೇಜ್‌ಅನ್ನು ಸೌತ್‌ ಮೆಟ್ರೋ ಫೈರ್‌ ರೆಸ್ಕ್ಯೂ ಇಲಾಖೆ ತನ್ನ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ.

ಕೊಳದಲ್ಲಿ ಸಿಲುಕಿಕೊಂಡಿರುವ ನಾಯಿಯ ರಕ್ಷಣೆಗೆಂದು ಹಗ್ಗದ ನೆರವನಿಂದ ನೀರಿಗೆ ಧುಮುಕುವ ಫೈರ್‌ಫೈಟರ್‌ ಒಬ್ಬರು ಸಾಹಸ ಮಾಡಿ ಆ ನಾಯಿಯನ್ನು ರಕ್ಷಿಸುವ ದೃಶ್ಯಾವಳಿಯನ್ನು 35 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...