
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪ್ರಾಣಿಯ ಮುದ್ದಾದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತೆ. ಈ ಹೊಸ ವಿಡಿಯೋಗಳ ಹಾವಳಿ ನಡುವೆಯೇ ಈ ಹಿಂದೆಯೇ ವೈರಲ್ ಆಗಿದ್ದ ಆನೆ ಮರಿಯ ವಿಡಿಯೋವೊಂದು ಇದೀಗ ಮತ್ತೆ ಟ್ರೆಂಡಿಂಗ್ನಲ್ಲಿದೆ. ಐಎಫ್ಎಸ್ ಅಧಿಕಾರಿ ರಮೇಶ್ ಪಾಂಡೆ ಎಂಬವರು ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಭಾವುಕರನ್ನಾಗಿಸುತ್ತೆ ಮರಿಯಾನೆ ಮೇಲಿನ ತಾಯಿ ಪ್ರೀತಿ
ದಿನವಿಡೀ ಆಟವಾಡಿ ಮಜಾ ಮಾಡಿದ್ದ ಆನೆ ಮರಿಯೊಂದು ಮೃಗಾಲಯದಲ್ಲಿ ನಿದ್ದೆಗೆ ಜಾರಿತ್ತು. ಆನೆ ಮರಿಯ ತಾಯಿ ನಿದ್ದೆಯಿಂದ ಎಬ್ಬಿಸೋಕೆ ಎಷ್ಟೇ ಪ್ರಯತ್ನಪಟ್ಟರೂ ಮರಿ ಮಾತ್ರ ಏಳಲೇ ಇಲ್ಲ. ಇದರಿಂದ ಆತಂಕಕ್ಕೊಳಗಾದ ತಾಯಿ ಆನೆ ಸಹಾಯಕ್ಕಾಗಿ ಮೃಗಾಲಯದ ಸಿಬ್ಬಂದಿ ಬಳಿ ಹೋಗಿದೆ. ಕೂಡಲೇ ಬಂದ ಇಬ್ಬರು ಸಿಬ್ಬಂದಿ ಮರಿ ಆನೆಯನ್ನ ಎಬ್ಬಿಸಿದ್ದಾರೆ. ಎಚ್ಚರಗೊಂಡ ಮರಿ ಆನೆ ತಾಯಿ ಬಳಿ ಓಡಿ ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೇ ವೀವ್ಸ್ ಸಂಪಾದಿಸಿದೆ.