alex Certify ವಾರ್ಡ್ ‌ರೋಬ್ ‌ಗೆ ಬಣ್ಣ ಬಳಿಯುವಾಗ ಮಾಡಿದ ಎಡವಟ್ಟೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರ್ಡ್ ‌ರೋಬ್ ‌ಗೆ ಬಣ್ಣ ಬಳಿಯುವಾಗ ಮಾಡಿದ ಎಡವಟ್ಟೇನು ಗೊತ್ತಾ….?

ಕೆಲವೊಮ್ಮೆ ಕೆಲವರು ಮಾಡುವ ಎಡವಟ್ಟುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ. ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ವಾರ್ಡ್‌ರೋಬ್‌ಗೆ ಬಣ್ಣ ಬಳಿಯುವ ವೇಳೆ ದೊಡ್ಡ ಎಡವಟ್ಟು ಮಾಡಿಕೊಂಡು ಸುದ್ದಿಯಾಗಿದ್ದಾರೆ.

ಹೌದು, ಡೆಬ್ರಾ ಕೋಲಿಂಗ್‌ವುಡ್‌ ಎನ್ನುವ ಮಹಿಳೆ ಮಾಡಿರುವ ಎಡವಟ್ಟೀಗ ಭಾರಿ ವೈರಲ್‌ ಆಗಿದೆ. ಕೆಲ ದಿನಗಳ ಹಿಂದೆ ಡೆಬ್ರಾ ಅವರು ತಮ್ಮ ಮನೆಯಲ್ಲಿರುವ ವಾರ್ಡ್‌ರೋಬ್‌ಗೆ ಬಣ್ಣ ಹಚ್ಚಲು ಮುಂದಾದರು. ಆ ವೇಳೆ ಬಿಳಿ ಬಣ್ಣವನ್ನು ವಾರ್ಡ್ ‌ರೋಬ್‌ಗೆ ಹಚ್ಚುವ ಉತ್ಸಾಹದಲ್ಲಿ ಒಳಗಿರುವ ಬಟ್ಟೆಗಳನ್ನೇ ಮರೆತಿದ್ದಾರೆ. ಶೇ.75ರಷ್ಟು ಬಣ್ಣ ಹಚ್ಚಿದ್ದು ನೆನಪಾದ ಬಳಿಕ ಡೋರ್‌ ತಗೆದು ನೋಡಿದಾಗ, ತಮ್ಮ ಪತಿಯ ಬಟ್ಟೆಗೆಲ್ಲ ಈ ಬಿಳಿ ಬಣ್ಣ ಹಚ್ಚಿರುವುದನ್ನು ನೋಡಿ ಗಾಬರಿ ಬಿದ್ದಿದ್ದಾರೆ.

ವಾರ್ಡ್‌ರೋಬ್‌ ಬಾಗಿಲಿನ ನಡುವೆಯಿರುವ ಸಂದಿನ ಮೂಲಕ ಪತಿಯ ಬಟ್ಟೆಗೆ ಬಣ್ಣ ಮೆತ್ತಿಕೊಂಡಿದೆ. ಈ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡು ತಾವು ಮಾಡಿರುವ ಎಡವಟ್ಟಿನ ಬಗ್ಗೆ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಭಿನ್ನವಿಭಿನ್ನ ಕಾಮೆಂಟ್‌ ಮಾಡಿದ್ದು ಇದೀಗ ಈ ಫೋಟೋ ವೈರಲ್‌ ಆಗಿದೆ. ಕೆಲವರು ಈ ಹೊಸ ಡಿಸೈನ್‌ಗೆ ಎಷ್ಟು ಹಣ ನೀಡಬೇಕು ಎಂದು ಅಣಕವಾಡಿದರೆ, ಇನ್ನು ಕೆಲವರು ಆಕೆಯ ಪತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...