alex Certify ಜಗತ್ತಿನ ಅತ್ಯಂತ ದುಬಾರಿ ಕಾರಿನ ಮಾಲೀಕರಾದ ರೊನಾಲ್ಡೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ದುಬಾರಿ ಕಾರಿನ ಮಾಲೀಕರಾದ ರೊನಾಲ್ಡೋ

ಫುಟ್ಬಾಲ್‌ ಜಗತ್ತಿನ ಸೂಪರ್‌ ಸ್ಟಾರ್‌, ಪೋರ್ಚುಗಲ್‌ನ ಕ್ರಿಶ್ಚಿಯಾನೋ ರೊನಾಲ್ಡೋ ಜಗತ್ತಿನ ಅತ್ಯಂತ ದುಬಾರಿ ಕಾರಿನ ಮಾಲೀಕರಾಗಿದ್ದಾರೆ. ಬುಗಾತಿ ಲಾವಾಟರ್‌ ನಾರೆ ಹೆಸರಿನ ಈ ಕಾರನ್ನು 8.5 ಮಿಲಿಯನ್ ಯೂರೋ (75 ಕೋಟಿ ರೂ.ಗಳು)‌ ಕೊಟ್ಟು ತಮ್ಮ ಕಲೆಕ್ಷನ್‌ಗೆ ಸೇರಿಸಿಕೊಂಡಿದ್ದಾರೆ ರೊನಾಲ್ಡೋ.

ಇಟಲಿಯ ಜುವೆಂಟಸ್‌ ಕ್ಲಬ್‌ಗೆ ತನ್ನ 36ನೇ ಚಾಂಪಿಯನ್‌ಶಿಪ್‌ ಜಯಿಸಲು ನೆರವಾದ ರೊನಾಲ್ಡೋ, ಜಗತ್ತಿನಲ್ಲಿ ಕೇವಲ 10 ಮಾತ್ರವೇ ಇರುವಂಥ ಕಾರೊಂದರ ಮಾಲೀಕರಾಗಿದ್ದಾರೆ. 60ಕಿಮೀ/ಗಂಟೆ ವೇಗವನ್ನು ಕೇವಲ 2.4 ಸೆಕೆಂಡ್‌ಗಳಲ್ಲಿ ತಲುಪಬಲ್ಲ ಈ ಕಾರಿನ ಗರಿಷ್ಠ ವೇಗವು 380ಕಿಮೀ/ಗಂಟೆಯಷ್ಟಿದೆ.

ರೊನಾಲ್ಡೋ ಬಳಿ ಇರುವ ಕಾರುಗಳ ಸಂಗ್ರಹದ ಒಟ್ಟಾರೆ ಮೌಲ್ಯವು 264 ಕೋಟಿ ರೂ.ಗಳಷ್ಟಿದೆ. ಇವುಗಳಲ್ಲದೇ ಕಳೆದ ಜೂನ್‌ನಲ್ಲಿ ಲಕ್ಸೂರಿ ಯಾಚ್‌ ಒಂದನ್ನು 5.5 ದಶಲಕ್ಷ ಪೌಂಡ್‌ ತೆತ್ತು ಖರೀದಿಸಿದ್ದಾರೆ. 35ರ ಹರೆಯದ ರೊನಾಲ್ಡೋ, 88 ಅಡಿ ಉದ್ದವಿರುವ ಈ ಯಾಚ್‌ನಲ್ಲಿ 5 ಲಕ್ಸುರಿ ಕ್ಯಾಬಿನ್‌ಗಳು ಹಾಗೂ 6 ವಿಶೇಷವಾಗಿ ಡೆಕೋರೇಟ್ ಮಾಡಲ್ಪಟ್ಟ ಬಾತ್‌ರೂಂಗಳು ಇವೆ.

View this post on Instagram

You choose the view ??

A post shared by Cristiano Ronaldo (@cristiano) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...