alex Certify ಮೊಮ್ಮಕ್ಕಳ ಮನೆಗೆ ಹೋಗಲಾಗದ್ದಕ್ಕೆ ಈ ವೃದ್ಧ ದಂಪತಿ ಏನು ಮಾಡಿದ್ರು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಕ್ಕಳ ಮನೆಗೆ ಹೋಗಲಾಗದ್ದಕ್ಕೆ ಈ ವೃದ್ಧ ದಂಪತಿ ಏನು ಮಾಡಿದ್ರು ನೋಡಿ

ಅಮೆರಿಕದಲ್ಲಿ ಸದ್ಯ ಥ್ಯಾಂಕ್ಸ್ ಗಿವಿಂಗ್​ ಕಾರ್ಯಕ್ರಮದ್ದೇ ಸಂಭ್ರಮ. ತಮ್ಮ ಪ್ರೀತಿ ಪಾತ್ರರಿಗೆ,  ಕುಟುಂಬಸ್ಥರಿಗೆ ಕೃತಜ್ಞತೆ ಅರ್ಪಿಸುವ ವಿಶೇಷ ಆಚರಣೆಗೆ ಟೆಕ್ಸಾಸ್​​ನ ವೃದ್ಧ ದಂಪತಿ ಹೊಸ ಐಡಿಯಾ ನೀಡಿದ್ದಾರೆ. ಕೊರೊನಾದಿಂದಾಗಿ ತಮ್ಮ ಮೊಮ್ಮಕ್ಕಳು ಇರುವಲ್ಲಿ ಹೋಗಿ ಈ ಕಾರ್ಯಕ್ರಮ ಆಚರಿಸಲು ಸಾಧ್ಯವಾಗದ ಹಿನ್ನೆಲೆ ಮೊಮ್ಮಕ್ಕಳಿಗೆ ತಮ್ಮ ಕಟೌಟ್​ನ್ನ ಕಳುಹಿಸಿಕೊಟ್ಟಿದ್ದಾರೆ.

ಮಿಸ್ಸಿ ಹಾಗೂ ಬ್ಯಾರಿ ಬುಚನನ್​​​ ದಂಪತಿ ತಮ್ಮ ಕಟೌಟ್​ಗಳನ್ನ ಕ್ಯಾಲಿಫೋರ್ನಿಯಾದಲ್ಲಿರುವ ಮಗಳ ಮನೆಗೆ ಹಾಗೂ ಟೆಕ್ಸಾಸ್​ನಲ್ಲಿರುವ ಮಗನ ಮನೆಗೆ ಕಳುಹಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮಿಸ್ಸಿ, ಪ್ರತಿ ವರ್ಷ ನಾವು ಈ ಕಾರ್ಯಕ್ರಮಕ್ಕೆ ಮಗಳು ಹಾಗೂ ಮಗನ ಮನೆಗೆ ಹೋಗುತ್ತಿದ್ದೆವು. ಆದರೆ ಈ ಬಾರಿ ಕೋವಿಡ್​ ಇರೋದ್ರಿಂದ ಪ್ರಯಾಣ ಮಾಡೋಕೆ ಮನಸ್ಸಿರಲಿಲ್ಲ. ಆದರೆ ಏನಾದ್ರೂ ವಿಶೇಷವಾಗಿ ಈ ಕಾರ್ಯಕ್ರಮ ನಡೆಸಬೇಕು ಎಂದು ಯೋಚನೆ ಮಾಡಿದ್ವಿ. ಹೀಗಾಗಿ ಈ ರೀತಿ ಪ್ಲಾನ್​ ಮಾಡಿ ಕಟೌಟ್​ ಕಳುಹಿಸಿ ಕೊಟ್ಟೆವು ಅಂತಾ ಹೇಳಿದ್ದಾರೆ. ಈ ಫೋಟೋಗಳನ್ನ ನೋಡಿದ ನೆಟ್ಟಿಗರು ವೃದ್ಧ ದಂಪತಿ ಪ್ಲಾನ್​ಗೆ ಶಹಬ್ಬಾಸ್​ ಎಂದಿದ್ದಾರೆ.

Welcome to the "cardboard" family! Yep, Barry and I had a life-sized cutout made and shipped to our kids/ grandkids in…

Posted by Missy Buchanan on Tuesday, November 17, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...