alex Certify ಪತ್ನಿಯ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ವೃದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ವೃದ್ದ

ಕೊರೋನಾ ವೈರಸ್‌ ಅಬ್ಬರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗಿರುವುದು ಜಗತ್ತಿನಾದ್ಯಂತ ಜನರಿಗೆ ನೋವುಂಟು ಮಾಡುತ್ತಿದೆ. ಅನೇಕ ವೃದ್ಧ ಜೀವಗಳು ಈ ಸಾಂಕ್ರಮಿಕಕ್ಕೆ ಬಲಿಯಾಗುತ್ತಿರುವ ಸುದ್ದಿಗಳು ಬಹಳ ಡಿಪ್ರೆಸ್ ಆಗುವಂತೆ ಮಾಡುತ್ತಿದೆ.

ಬ್ರಿಟನ್‌ನ ಜೋ ವಿಲ್ಸನ್ (92) ಹಾಗೂ ಅವರ ಪತ್ನಿ ಮರ್ಜರೀ (88) ದಂಪತಿಗಳು ಕಳೆದ 62 ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದು, ಇಲ್ಲಿನ ಬುರ್ಟನ್‌ನ ಕ್ವೀನ್ಸ್‌ ಆಸ್ಪತ್ರೆಯಲ್ಲಿ ಪರಸ್ಪರ ಕೈ-ಕೈ ಹಿಡಿದುಕೊಂಡೇ ಅಂತಿಮ ವಿದಾಯ ಹೇಳಿಕೊಂಡಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿಲ್ಸನ್‌ ಜೂನ್ 15ರಂದು ಮೃತಪಟ್ಟಿದ್ದಾರೆ. ಅವರ ಅಂತಿಮ ಕ್ಷಣಗಳನ್ನು ತಮ್ಮ ಮುದ್ದಿನ ಮಡದಿಯೊಂದಿಗೆ ಕಳೆಯಲು ವೈದ್ಯರು ಅವಕಾಶ ಮಾಡಿಕೊಟ್ಟಿದ್ದಾರೆ. ಅದೇ ಆಸ್ಪತ್ರೆಯಲ್ಲಿಯೇ ಶುಶ್ರೂಷೆ ಪಡೆಯುತ್ತಿದ್ದ ಮರ್ಜರಿರನ್ನು ವಿಲ್ಸನ್‌ರ ಹಾಸಿಗೆಯ ಪಕ್ಕದ ಹಾಸಿಗೆಗೆ ಕರೆತಂದ ಆಸ್ಪತ್ರೆಯ ಸಿಬ್ಬಂದಿ, ದಂಪತಿಗಳಿಬ್ಬರು ಕೊನೆಯ ಬಾರಿಗೆ ಭಾವ ನಿವೇದನೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಈ ಎಮೋಷನ್ ಕ್ಷಣದ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ಕಣ್ಣೀರಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...