alex Certify BIG BREAKING: ಕೊರೊನಾ ಅಬ್ಬರದ ಮಧ್ಯೆ ಸಿಕ್ಕಿದೆ ಭರ್ಜರಿ ನೆಮ್ಮದಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಅಬ್ಬರದ ಮಧ್ಯೆ ಸಿಕ್ಕಿದೆ ಭರ್ಜರಿ ನೆಮ್ಮದಿ ಸುದ್ದಿ

ಕೊರೊನಾ ವೈರಸ್ ಸಂಕಟ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಪ್ರತಿ ದಿನ ಹೆಚ್ಚಾಗ್ತಿದೆ. ಆದ್ರೆ ಈ ಮಧ್ಯೆ ಕೊರೊನಾ ವೈರಸ್ ಬಗ್ಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ರೋಗಿಗಳು 12 ದಿನಗಳ ನಂತರ ಕೊರೊನಾ ಸೋಂಕನ್ನು ಹರಡುವುದಿಲ್ಲವಂತೆ.

ರೋಗಿಗಳು 11 ದಿನಗಳ ನಂತರ ಸೋಂಕು ಹರಡುವುದಿಲ್ಲ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಸಿಂಗಾಪುರ್ ನ್ಯಾಷನಲ್ ಸೆಂಟರ್ ಫಾರ್ ಸಾಂಕ್ರಾಮಿಕ ರೋಗಗಳ ಮತ್ತು ಅಕಾಡೆಮಿ ಆಫ್ ಮೆಡಿಸಿನ್‌ನ ಅಧ್ಯಯನವು ಇದನ್ನು ಬಹಿರಂಗಪಡಿಸಿದೆ. ರೋಗಲಕ್ಷಣಗಳು ಕಾಣಿಸಿಕೊಳ್ಳುವ 2 ದಿನಗಳ ಮೊದಲಿನಿಂದಲೇ ಕೊರೊನಾ ರೋಗಿಗಳು ಸೋಂಕನ್ನು ಹರಡಬಹುದು.

ರೋಗಲಕ್ಷಣಗಳು ಕಂಡುಬಂದ 7 ರಿಂದ 10 ದಿನಗಳವರೆಗೆ ಕೊರೊನಾ ರೋಗಿಗಳಿಗೆ ಸೋಂಕನ್ನು ಹರಡುವ ಸಾಮರ್ಥ್ಯವಿರುತ್ತದೆ ಎಂದು ಅಧ್ಯಯನದ ಸಮಯದಲ್ಲಿ ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸುಮಾರು 73 ಕೊರೊನಾ ರೋಗಿಗಳನ್ನು ಅಧ್ಯಯನ ಮಾಡಿದ್ದು, ಈ ಸಮಯದಲ್ಲಿ  ಹೊಸ ವಿಷಯ ಪತ್ತೆಯಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...